ಬಾಲಿವುಡ್ ಸ್ಟಾರ್ ನಟ ವಿವೇಕ್ ಒಬೇರಾಯ್ ಕನ್ನಡ ಕಲಿಯುತ್ತಿದ್ದಾರೆ. ಹೇಳಿ ಕೇಳಿ ಕರ್ನಾಟಕದ ಅಳಿಯ. ಕನ್ನಡ ಕಲಿಯೋದ್ರಲ್ಲೇನು ವಿಶೇಷ ಅಂತೀರೇನೋ.. ಅವರು ಕನ್ನಡ ಕಲಿಯುತ್ತಿರೋದು ರುಸ್ತುಂ ಚಿತ್ರಕ್ಕಾಗಿ. ನಿಮಗೆಲ್ಲ ಗೊತ್ತಿರೋ ಹಾಗೆ ರುಸ್ತುಂನಲ್ಲಿ ವಿವೇಕ್ ಒಬೇರಾಯ್ ಪ್ರಧಾನ ಪಾತ್ರ ಮಾಡುತ್ತಿದ್ದಾರೆ. ವಿವೇಕ್ ಒಬೇರಾಯ್‍ಗೆ ರುಸ್ತುಂ ಜೋಡಿಯಾಗಿರೋದು ರಚಿತಾ ರಾಮ್.
ಶಿವಣ್ಣ-ಶ್ರದ್ಧಾ ಶ್ರೀನಾಥ್ ಅಭಿನಯದ ಈ ಚಿತ್ರದಲ್ಲಿ ವಿವೇಕ್ ಒಬೇರಾಯ್ ಅವರದ್ದು ಪುಟ್ಟ ಆದರೆ, ಪ್ರಮುಖ ಪಾತ್ರ. ಹೀಗಾಗಿ ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಲು ಮುಂದಾಗಿದ್ದಾರಂತೆ ವಿವೇಕ್ ಒಬೇರಾಯ್.
ರವಿವರ್ಮ ನಿರ್ದೇಶನದ ಚೊಚ್ಚಲ ಚಿತ್ರಕ್ಕೆ ಜಯಣ್ಣ-ಭೋಗೇಂದ್ರ ನಿರ್ಮಾಪಕರು. ವಿವೇಕ್ ಒಬೇರಾಯ್ ಕನ್ನಡದಲ್ಲಿ.. ಸ್ವತಃ ತಾವೇ ಡಬ್ ಮಾಡುತ್ತೇನೆ ಎಂದಿರುವುದನ್ನು ಕೇಳಿ ಚಿತ್ರತಂಡ ಖುಷಿಯಾಗಿದೆ.