ಕನ್ನಡದ ನಂ.1 ಡ್ಯಾನ್ಸರ್ ಯಾರು ಅನ್ನೋ ಪ್ರಶ್ನೆಗೆ ಉತ್ತರ ಕೆಲವು ವರ್ಷಗಳ ಹಿಂದೆ ಶಿವಣ್ಣನ ಹೆಸರಲ್ಲಿತ್ತು. ಈಗ ಅದು ಅಪ್ಪು ಹೆಸರಲ್ಲಿದೆ. ಮುಂದಿನ ದಿನಗಳಲ್ಲಿ ಆ ಪಟ್ಟ ಯುವರಾಜ್ ಕುಮಾರ್ ಹೆಸರಿಗೆ ಹೋಗುತ್ತಾ..? ಅಂಥಾದ್ದೊಂದು ಅದ್ಭುತ ಸ್ಟೆಪ್ಪುಗಳ ಮೂಲಕ ಗಮನ ಸೆಳೆದಿದ್ದಾರೆ ಯುವರಾಜ್ ಕುಮಾರ್.
ನಟಸಾರ್ವಭೌಮ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಧಮ್ ಪವರೇ ಹಾಡಿಗೆ ಹೆಜ್ಜೆ ಹಾಕಿದ ಯುವರಾಜ್ ಕುಮಾರ್, ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಮಗನ ಒಂದೊಂದು ಸ್ಟೆಪ್ಪನ್ನೂ ರಾಘವೇಂದ್ರ ರಾಜ್ಕುಮಾರ್ ದಂಪತಿ, ಭಾವುಕರಾಗಿ ನೋಡುತ್ತಿದ್ದರೆ, ಚಿಕ್ಕಪ್ಪ ಪುನೀತ್ ರಾಜ್ಕುಮಾರ್ ಹುರಿದುಂಬಿಸುತ್ತಿದ್ದರು.
ನಮ್ಮನ್ನು ಹರಸಿದಂತೆ ಯುವರಾಜನನ್ನೂ ಹರಸಿ ಎಂದು ಮನವಿ ಮಾಡಿದರು ಪುನೀತ್ ರಾಜ್ಕುಮಾರ್.