` ಬಂಗಾರದ ಮನುಷ್ಯನಲ್ಲಿ ರಾಜಣ್ಣ.. ಅಮ್ಮನ ಮನೆಯಲ್ಲಿ ರಾಘಣ್ಣ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ammana mane teaser released
Ammana Mane Teaser Launched

ಅಮ್ಮನ ಮನೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ರೆಗ್ಯುಲರ್ ಟೀಸರ್‍ಗಳಿಗಿಂತ ವಿಭಿನ್ನವಾಗಿರುವ ಕಾರಣಕ್ಕೇ ಗಮನ ಸೆಳೆಯುತ್ತಿದೆ. ರಾಘವೇಂದ್ರ ರಾಜ್‍ಕುಮಾರ್, 14 ವರ್ಷಗಳ ನಂತರ ನಟಿಸಿರುವ ಸಿನಿಮಾ ಎಂಬುದು ಚಿತ್ರಕ್ಕಿರುವ ಸ್ಪೆಷಲ್ ಕ್ವಾಲಿಟಿ. ನಿಖಿಲ್ ಮಂಜು ನಿರ್ದೇಶನದ ಸಿನಿಮಾ ಟೀಸರ್‍ನಲ್ಲಿ ಗಮನ ಸೆಳೆಯುವುವುದು ರಾಘವೇಂದ್ರ ರಾಜ್‍ಕುಮಾರ್ ಪಾತ್ರದ ಹೆಸರು... ರಾಜೀವ.

ಬಂಗಾರದ ಮನುಷ್ಯ ಚಿತ್ರದಲ್ಲಿ ರಾಜೀವಪ್ಪನ ಹೆಸರಲ್ಲಿ ಕರುನಾಡಿನ ಜನರನ್ನು ಮೋಡಿದ್ದವರು ಡಾ.ರಾಜ್. ಈಗ.. ಅದೇ ಹೆಸರಲ್ಲಿ ರಾಘವೇಂದ್ರ ರಾಜ್‍ಕುಮಾರ್ ನಟಿಸಿದ್ದಾರೆ. ಚಿತ್ರದ ಹೆಸರೇ ಅಮ್ಮನ ಮನೆ. ತಾಯಿಯ ಮಡಿಲಲ್ಲಿ ಮಗುವಾಗಿರುವ ರಾಘಣ್ಣ, ರಾಘಣ್ಣನ ಮಡಿಲಲ್ಲಿ ಮಗುವಾಗಿರುವ ತಾಯಿ.. ಹೀಗೆ ವಿಭಿನ್ನತೆಯ ಮೂಲಕ ಸಂಥಿಂಗ್ ಸ್ಪೆಷಲ್ ಏನೋ ಹೇಳುತ್ತಿದ್ದಾರೆ ಎಂಬ ಭಾವನೆ ಮೂಡಿಸುವುದಂತೂ ಸತ್ಯ.

ಅಮ್ಮನ ಮನೆ ಸಿನಿಮಾ, ಫೆಬ್ರವರಿಯಲ್ಲಿ ರಿಲೀಸ್ ಆಗಲಿದೆ.

I Love You Movie Gallery

Rightbanner02_butterfly_inside

Paddehuli Movie Gallery