ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಚಂದ್ರನ್ ವೃತ್ತಿಪರ ಮಾಡೆಲ್. ಅವರೀಗ ಸಿನಿಮಾಗೆ ಎಂಟ್ರಿ ಕೊಡುತ್ತಿದ್ದಾರೆ. ಅದೂ ಪುನೀತ್ ರಾಜ್ಕುಮಾರ್ ನಿರ್ಮಾಣದ ಸಿನಿಮಾ ಮೂಲಕ. ರಘು ಸಮರ್ಥ ನಿರ್ದೇಶನದ ಚಿತ್ರದಲ್ಲಿ ರಾಗಿಣಿ ಚಂದ್ರನ್ ನಟಿಸಲಿದ್ದಾರೆ ಎಂಬ ಸುದ್ದಿಯನ್ನು ಈಗ ಪುನೀತ್ ಸ್ಪಷ್ಟಪಡಿಸಿದ್ದಾರೆ. ಇದೊಂದು ಮಹಿಳಾ ಪ್ರಧಾನ ಸಿನಿಮಾ.
`ಸಿನಿಮಾದ ಕಥೆ ಇಷ್ಟವಾಯ್ತು. ಒಂದೊಳ್ಳೆ ಫ್ರೆಶ್ ಥಾಟ್ ಚಿತ್ರದಲ್ಲಿದೆ. ಹೀಗಾಗಿ ನಿರ್ಮಾಣಕ್ಕೆ ಒಪ್ಪಿಕೊಂಡೆ' ಎಂದಿದ್ದಾರೆ ಪುನೀತ್. ಅವಿನಾಶ್, ಪ್ರಕಾಶ್ ಬೆಳವಾಡಿ ಹಾಗೂ ಅಚ್ಯುತ್ ಕುಮಾರ್ ಚಿತ್ರದ ಪ್ರಧಾನ ಪಾತ್ರಗಳಲ್ಲಿದ್ದಾರೆ.
ಪುನೀತ್ ನಿರ್ಮಾಣದಲ್ಲಿ 3 ಚಿತ್ರಗಳು ಶುರುವಾಗಿವೆ. ಕವಲುದಾರಿ, ಮಾಯಾಬಜಾರ್ ಹಾಗೂ ಪನ್ನಗಾಭರಣ ನಿರ್ದೇಶನದ ಇನ್ನೂ ಹೆಸರಿಡದ ಸಿನಿಮಾ. ಇದೂ ಶುರುವಾದರೆ 4ನೇ ಸಿನಿಮಾ ಆಗಲಿದೆ.