ಪುನೀತ್ ರಾಜ್‍ಕುಮಾರ್ ನಿರ್ಮಾಣದ, ದಾನಿಶ್ ಸೇಠ್ ಅಭಿನಯದ ಹೊಸ ಚಿತ್ರದಲ್ಲಿ ಸ್ವತಃ ಪುನೀತ್ ಅತಿಥಿ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದುವರೆಗೆ ಪುನೀತ್ ಯಾವುದೇ ಸಿನಿಮಾಗಳಲ್ಲಿ ಅತಿಥಿ ನಟನಾಗಿ ಕಾಣಿಸಿಕೊಂಡಿಲ್ಲ. ಬೇರೆಯವರ ಸಿನಿಮಾಗಳಲ್ಲಿ ಹಾಡಿದ್ದಾರೆ. ವಾಯ್ಸ್ ಓವರ್ ಕೊಟ್ಟಿದ್ದಾರೆ. ಅತಿಥಿ ನಟನಾಗಿರಲಿಲ್ಲ. ಅದನ್ನು ಈಗ ತಮ್ಮದೇ ನಿರ್ಮಾಣದ ಚಿತ್ರದಲ್ಲಿ ಬ್ರೇಕ ಮಾಡುತ್ತಿದ್ದಾರೆ ಪುನೀತ್.
ಪನ್ನಗಾಭರಣ ನಿರ್ದೇಶನದ ಚಿತ್ರದ ಚಿತ್ರೀಕರಣ ಈಗಾಗಲೇ ಶುರುವಾಗಿದೆ. ಹೊಸ ವರ್ಷ.. ಹೊಸ ಸಿನಿಮಾ.. ಹೊಸ ಜರ್ನಿ.. ಈ ಬಾರಿ ಪುನೀತ್ ಅಣ್ಣ ಹಾಗೂ ಪನ್ನಗಾಭರಣ ಜೊತೆ ಆರಂಭವಾಗಿದೆ. ಇದೊಂದು ವಿಶೇಷವಾದ ಸಿನಿಮಾ ಎಂದು ಹೇಳಿಕೊಂಡಿದ್ದಾರೆ ದಾನಿಶ್ ಸೇಠ್.