` ಈ ವಯಸ್ಸಲ್ ಏನ್ಮಾಡೋದೋ ಗೊತ್ತಾಗೋದಿಲ್ಲ.. ತಪ್ಪು ನಮ್ದಲ್ಲ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
panchatantra's second song released
Panchatantra

ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ ಅನ್ನೋ ಹಾಡು ಬಿಟ್ಟು, ಚಳಿಗಾಲದಲ್ಲಿ ನೋಡುಗರ ಮೈ ಬೆಚ್ಚಗಾಗಿಸಿದ್ದ ಯೋಗರಾಜ್ ಭಟ್ಟರು, ಪಂಚತಂತ್ರ ಚಿತ್ರದ 2ನೇ ಹಾಡಿನಲ್ಲಿ ಬಿಸಿಯಾದ ಮೈ ಕುಣಿದು ಕುಪ್ಪಳಿಸುವಂತೆ ಮಾಡಿಬಿಟ್ಟಿದ್ದಾರೆ. ಈ ವಯಸ್ಸಲ್ ಏನ್ಮಾಡೋದೋ ಗೊತ್ತಾಗೋದಿಲ್ಲ.. ಇಪ್ಪತ್ತನಾಲ್ಕು ಗಂಟೆ ಸಾಕಾಗ್ತಾ ಇಲ್ಲ.. ಅನ್ನೋ ಹಾಡು ಹುಡುಗ/ಹುಡುಗಿಯರನ್ನು ಕುಣಿದು ಕುಪ್ಪಳಿಸುವಂತೆ ಮಾಡಿದೆ. ಹಾಗೆ ನೋಡಿದರೆ ಭಟ್ಟರ ಈ ಹಾಡು, ಯುವಕ/ಯುವತಿಯರ ಮನಸ್ಸಿನಲ್ಲಿ ಆಗಾಗ್ಗೆ ಸುಳಿದು ಹೋಗುವ ಪದಗಳೇ. 

ದೊಡ್ಡವರ ಬಗೆಗಿನ ಯುವಕರ ಕಂಪ್ಲೇಂಟುಗಳೇ ಹಾಡಿನಲ್ಲಿರೋ  ಪದಗಳು. ತಾವು ಯುವಕರಾಗಿದ್ದಾಗ ಅನುಭವಿಸಿದ್ದ ಮತ್ತು ತಮ್ಮ ಮಕ್ಕಳು ಇನ್ನಷ್ಟು ದೊಡ್ಡವರಾದ ಮೇಲೆ ಅನುಭವಿಸಬೇಕಿರುವ ಎಲ್ಲವನ್ನೂ ಪದಗಳಲ್ಲೇ ಹಿಡಿದಿಟ್ಟಿದ್ದಾರೆ ಭಟ್ಟರು. ಅದನ್ನು ಅಷ್ಟೇ ಚೆಂದವಾಗಿ ಹಾಡಿರೋದು ಹರಿಕೃಷ್ಣ. ಸಿಂಪಲ್ಲಾಗ್ ಹೇಳಬೇಕಂದ್ರೆ, ಇದು ಅಪ್ಪಟ ಪಾರ್ಟಿ ಸಾಂಗ್. 

Matthe Udbhava Trailer Launch Gallery

Maya Bazaar Pressmeet Gallery