ಗೋಲ್ಡನ್ ಸ್ಟಾರ್ ಅಂದ್ರೆ ಗಣೇಶ್. ಇದ್ಯಾರು ಇದು ಹೇಮಂತ್.. ಜಾಕಿ ಅಂದ್ರೆ ಭಾವನಾ. ಈ ಸಮೀಕ್ಷಾ ಯಾರು..? ಅನುಮಾನವಿದ್ದರೆ, ಪ್ರಶ್ನೆಗಳಿದ್ದರೆ ನೀವು ಪ್ರೀತಂ ಗುಬ್ಬಿ ಅವರನ್ನೇ ಕೇಳಬೇಕು.
ಅಂದಹಾಗೆ ಇದು 99 ಸಿನಿಮಾದ ಕಥೆ. ಈ ಚಿತ್ರದಲ್ಲಿ ನಾಯಕ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಾಯಕಿ ಜಾಕಿ ಭಾವನಾ. ಸಿನಿಮಾದಲ್ಲಿ ಇವರಿಬ್ಬರ ಯಂಗ್ ಏಜ್ ಪಾತ್ರಗಳು ಬರುತ್ತವೆ. ಆ ಪಾತ್ರಗಳಿಗೆ ಆಯ್ಕೆಯಾಗಿರುವುದೇ ಈ ಹೇಮಂತ್ ಮತ್ತು ಸಮೀಕ್ಷಾ.
ಈ ಹೇಮಂತ್ ಯಾರು ಅಂದ್ರೆ, ಇವರು ಜೂನಿಯರ್ ರಾಮಾಚಾರಿ. ಮಿಸ್ಟರ್ & ಮಿಸೆಸ್ ರಾಮಾಚಾರಿ ಚಿತ್ರದಲ್ಲಿ ಯಶ್ ಬಾಲಕನ ಪಾತ್ರದಲ್ಲಿ ಮಿಂಚಿದ್ದ ಹುಡುಗನನ್ನು ನೆನಪಿಸಿಕೊಳ್ಳಿ. ಅವನೇ.. ಇವರು. ಇನ್ನು ಸಮೀಕ್ಷಾ ಧಾರಾವಾಹಿ ಕಲಾವಿದೆ.
99 ಚಿತ್ರದ ಚಿತ್ರೀಕರಣ ಮಂಗಳೂರು, ಪುತ್ತೂರು, ತೀರ್ಥಹಳ್ಳಿ ಕಡೆ ಸಾಗುತ್ತಿದೆ. ಡಿಸೆಂಬರ್‍ನಲ್ಲಿ ಸೆಟ್ಟೇರಿರುವ ಸಿನಿಮಾ, ಮಾರ್ಚ್ ವೇಳೆಗೆ ಥಿಯೇಟರಿಗೆ ಬರಲಿದೆ. ಎರಡು ಕಾಲಘಟ್ಟದಲ್ಲಿ ನಡೆಯುವ ಸಿನಿಮಾ ಆದ ಕಾರಣ, ದೃಶ್ಯಗಳಿಗೆ ತಕ್ಕಂತೆ ಲೊಕೇಷನ್ ಹುಡುಕಿಕೊಳ್ಳುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ ಪ್ರೀತಂ ಗುಬ್ಬಿ.