` ಶ್ರೀಮುರಳಿ ಎದುರಿಗೆ ತ್ರಿಮೂರ್ತಿ ಬ್ರದರ್ಸ್ ವಿಲನ್ನುಗಳು..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
srimurali will fight with tirmurthi brothers on
Bharaathe

ಭರಾಟೆ. ಶ್ರೀಮುರಳಿ ಅಭಿನಯದ ಸಿನಿಮಾ. ಬಹದ್ದೂರ್ ಚೇತನ್ ನಿರ್ದೇಶನದ ಸಿನಿಮಾ. ಮಫ್ತಿ ನಂತರ ಶ್ರೀಮುರಳಿ ಅಭಿನಯಿಸುತ್ತಿರುವ ಚಿತ್ರ. ಈಗಾಗಲೇ ಶೇ.50ರಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಇದೇ ತಿಂಗಳು 11ನೇ ತಾರೀಕಿನಿಂದ ಕೊನೆಯ ಹಂತದ ಚಿತ್ರೀಕರಣಕ್ಕೆ ಮುಂದಾಗಿದೆ. ಈ ಹಂತದಲ್ಲಿಯೇ ಚಿತ್ರತಂಡಕ್ಕೆ ತ್ರಿಮೂರ್ತಿ ವಿಲನ್ ಸೋದರರು ಎಂಟ್ರಿಯಾಗುತ್ತಿದ್ದಾರೆ.

ಅವರು ಬೇರಿನ್ಯಾರೂ ಅಲ್ಲ. ಸಾಯಿಕುಮಾರ್.. ರವಿಶಂಕರ್ ಮತ್ತು ಅಯ್ಯಪ್ಪ. ಚಿತ್ರದ ಕಥೆ ಮತ್ತು ಪಾತ್ರಗಳನ್ನು ಕೇಳಿ ಈಗಾಗಲೇ ರವಿಶಂಕರ್ ಮತ್ತು ಅಯ್ಯಪ್ಪ ಯೆಸ್ ಎಂದಿದ್ದಾರೆ. ಬಾಕಿ ಇರುವುದು ಸಾಯಿಕುಮಾರ್. 

ಚಿತ್ರದ ಕಥೆ ಕೇಳಿ ಸಾಯಿಕುಮಾರ್ ಥ್ರಿಲ್ಲಾಗಿದ್ದಾರೆ. ಸೋದರರ ಜೊತೆ ನಟಿಸುವ ವಿಷಯಕ್ಕೂ ಎಕ್ಸೈಟ್ ಆಗಿದ್ದಾರೆ. ಆದರೆ ಡೇಟ್ಸ್ ಪ್ರಾಬ್ಲಂ ಹಿನ್ನೆಲೆಯಲ್ಲಿ ಇನ್ನೂ ಖಚಿತಪಡಿಸಿಲ್ಲ. ಡೇಟ್ಸ್ ಹೊಂದಿಸಿಕೊಂಡ ನಂತರ ಅವರು ಓಕೆ ಎನ್ನುವ ಚಾನ್ಸ್ ಇದೆ ಎಂದಿದ್ದಾರೆ ನಿರ್ದೇಶಕ ಚೇತನ್ ಕುಮಾರ್.