ಪುನೀತ್ ರಾಜ್‍ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರದಲ್ಲಿ ಎಷ್ಟು ಹಾಡುಗಳಿರಬಹುದು..? ನಾಲ್ಕು.. ಐದು.. ಆರು.. ಅಲ್ಲಲ್ಲ.. ಬರೋಬ್ಬರಿ 11 ಹಾಡುಗಳಿವೆ. ಲಹರಿ ಹೊರತಂದಿರುವ ಆಡಿಯೋ ಆಲ್ಬಂನಲ್ಲಿ ಒಟ್ಟು 11 ಸಾಂಗುಗಳಿವೆ.
ಪವನ್ ಒಡೆಯರ್ ನಿರ್ದೇಶನದ ಚಿತ್ರ ಮ್ಯೂಸಿಕಲ್ ಸಿನಿಮಾ ಆಗಲಿದೆಯಾ..? ಹಾಗೇನಿಲ್ಲ ಎನ್ನುತ್ತಿದೆ ಚಿತ್ರತಂಡ. ಚಿತ್ರದಲ್ಲಿರೋದು 4 ಹಾಡುಗಳು ಮಾತ್ರ ಅಂತೆ. ಉಳಿದಂತೆ ಹಾಡುಗಳು ಜಸ್ಟ್ ಫಾರ್ ಫ್ಯಾನ್ಸ್.
ಚಿತ್ರದಲ್ಲಿ ಅಪ್ಪುಗೆ ರಚಿತಾ ರಾಮ್, ಅನುಪಮಾ ಪರಮೇಶ್ವರನ್ ಜೋಡಿಯಾಗಿ ನಟಿಸಿದ್ದು, ಬಿ.ಸರೋಜಾದೇವಿ ಸುದೀರ್ಘ ಅವಧಿಯ ನಂತರ ಮತ್ತೊಮ್ಮೆ ಬೆಳ್ಳಿತೆರೆ ಮೇಲೆ ಬರುತ್ತಿದ್ದಾರೆ.