` ಗೌರಿ ಲಂಕೇಶ್ ಆಗ್ತಾರಾ ಟಗರು ಸರೋಜಾ..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
is triveni rao acting as gauri lankesh
Triveni Rao

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನೆನಪಿದೆಯಲ್ಲವೇ..? ಮನೆಯ ಬಳಿ ಹಂತಕರ ಗುಂಡಿಗೆ ಬಲಿಯಾದ ಗೌರಿ, ಹತ್ಯೆಯಾದ ಮೇಲೆ ಜಗತ್ತಿನಾದ್ಯಂತ ಸುದ್ದಿಯಾದರು. ಈಗ ಅವರ ಹತ್ಯೆ ದೃಶ್ಯವನ್ನೇ ಹೋಲುವ ಸೀನ್ ಮಿಸ್ಟರ್ ನಟ್ವರ್‍ಲಾಲ್ ಅನ್ನೋ ಚಿತ್ರದಲ್ಲಿ ಚಿತ್ರೀಕರಣವಾಗಿದೆ. ಹಾಗೆ ಕೊಲೆಯಾಗುವ ಪಾತ್ರದಲ್ಲಿ ನಟಿಸಿರೋದು ಟಗರು ಚಿತ್ರದ ಕಾನ್‍ಸ್ಟೇಬಲ್ ಸರೋಜಾ ಖ್ಯಾತಿಯ ತ್ರಿವೇಣಿ ರಾವ್.

ಗೌರಿ ಲಂಕೇಶ್ ಘಟನೆಗೂ, ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಚಿತ್ರದ ಕಥೆಗೆ ಪತ್ರಕರ್ತೆಯನ್ನು ಕೊಲ್ಲುವ ದೃಶ್ಯ ಸೂಕ್ತವೆನಿಸಿದ ಕಾರಣ, ಚಿತ್ರೀಕರಿಸಲಾಗಿದೆ ಎಂದಿದ್ದಾರೆ ನಟ, ನಿರ್ಮಾಪಕ ತನುಷ್. ಲವ ನಿರ್ದೇಶನದ ಚಿತ್ರದಲ್ಲಿ ತ್ರಿವೇಣಿ ರಾವ್ ಅವರಿಗೆ ಪ್ರಮುಖ ಪಾತ್ರವಿದೆ.

Ayushmanbhava Movie Gallery

Ellidhe Illitanaka Movie Gallery