ಗಣೇಶ್ ಎಂದರೆ ಕಾಮಿಡಿ.. ಗಣೇಶ್ ಎಂದರೆ ಸೆಂಟಿಮೆಂಟ್.. ಆ್ಯಕ್ಷನ್ ಸಿನಿಮಾ ಮಾಡಿದ್ದರೂ, ಗಣೇಶ್ ಚಿತ್ರರಸಿಕರ ಪಾಲಿಗೆ ನಮ್ಮನೆ ಹುಡ್ಗ. ಇಂತಹ ಗಣೇಶ್ ಇದೇ ಮೊದಲ ಬಾರಿಗೆ ಭಯ ಹುಟ್ಟಿಸೋಕೆ ಬರುತ್ತಿದ್ದಾರೆ. ಗಿಮಿಕ್ ಚಿತ್ರದ ಫಸ್ಟ್ ಲುಕ್ ಹೊರಬಿದ್ದಿದ್ದು, ದೆವ್ವ ಭೂತದ ಕಥೆ ಹೇಗಿದೆ ಎಂಬ ಕುತೂಹಲ ಹುಟ್ಟಿಸಿದೆ.
ಸ್ಮಶಾನದಲ್ಲಿ, ಸಮಾಧಿಗಳ ಪಕ್ಕ ಲಾಟೀನು ಹಿಡಿದಿರುವ ಗಣೇಶ್.. ಬೆನ್ನ ಹಿಂದೆ ಆತ್ಮಗಳ ಆಕ್ರಮಣ.. ಫಸ್ಟ್ಲುಕ್ನಲ್ಲಿ ಕಾಣ್ತಿರೋದು ಇಷ್ಟೆ. ನಿರ್ದೇಶಕ ನಾಗಣ್ಣ ಅವರಿಗೂ ಹಾರರ್ ಸಿನಿಮಾ ಹೊಸ ಅನುಭವ.ಶ್ರೀಲಂಕಾ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಶೂಟಿಂಗ್ ಅಂತಿಮ ಹಂತದಲ್ಲಿದೆ. ದೀಪಕ್ ಸಾಮಿ ನಿರ್ಮಾಣದ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದೆ.