ಐಟಿ ದಾಳಿ ಹಿನ್ನೆಲೆಯಲ್ಲಿ ಪುನೀತ್ ರಾಜ್ಕುಮಾರ್, ರಾಕ್ಲೈನ್ ವೆಂಕಟೇಶ್, ಹುಬ್ಬಳ್ಳಿಗೆ ಬರುತ್ತಾರೋ ಇಲ್ಲವೋ.. ನಟಸಾರ್ವಭೌಮ ಆಡಿಯೋ ರಿಲೀಸ್ ಆಗುತ್ತೋ.. ಇಲ್ಲವೋ ಎಂಬ ಎಲ್ಲ ಗೊಂದಲಗಳಿಗೆ ಈಗ ತೆರೆ ಬಿದ್ದಿದೆ. ಪುನೀತ್ ರಾಜ್ಕುಮಾರ್ ಮನೆಯಲ್ಲಿ ಗುರುವಾರ ಬೆಳಗ್ಗೆ ಶುರುವಾದ ಐಟಿ ತನಿಖೆ, ಶುಕ್ರವಾರ ರಾತ್ರಿ ಮುಗಿದಿದೆ. ಎಲ್ಲ ತನಿಖೆ, ವಿಚಾರಣೆ ಮುಗಿದ ಮೇಲೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಪುನೀತ್ ರಾಜ್ಕುಮಾರ್, ತನಿಖೆಗೆ ಎಲ್ಲ ಸಹಕಾರ ನೀಡಿದ್ದೇವೆ. ಅವರ ಕರ್ತವ್ಯ ಅವರು ಮಾಡಿದ್ದಾರೆ ಎಂದಿದ್ದಾರೆ.
ಇಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ನಟಸಾರ್ವಭೌಮ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಹೋಗುವುದಾಗಿಯೂ ಹೇಳಿದ್ದಾರೆ. ಇಂದಿನ ಕಾರ್ಯಕ್ರಮದಲ್ಲಿ ಪುನೀತ್ ಜೊತೆ ಯುವರಾಜ್ ಕುಮಾರ್ ಕೂಡಾ ಸ್ಟೆಪ್ ಹಾಕಲಿದ್ದಾರೆ. ಪವನ್ ಒಡೆಯರ್ ಈಗಾಗಲೇ ತಮ್ಮ ದೊಡ್ಡ ತಂಡದ ಜೊತೆ ಹುಬ್ಬಳ್ಳಿ ತಲುಪಿದ್ದಾರೆ. ರಾಕ್ಲೈನ್ ವೆಂಕಟೇಶ್ ಮನೆಯಲ್ಲಿ ಐಟಿ ವಿಚಾರಣೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಅವರು ಬರುವ ಸಾಧ್ಯತೆ ಇನ್ನೂ ಅನುಮಾನ.