ಸಿನಿಮಾ ಟಿಕೆಟ್‍ಗಳ ಮೇಲಿನ ಜಿಎಸ್‍ಟಿ ತೆರಿಗೆಯನ್ನು ಕೇಂದ್ರ ಸರ್ಕಾರ ಇಳಿಕೆ ಮಾಡಿದೆ. 100 ರೂ.ಗಿಂತ ಕಡಿಮೆ ಬೆಲೆಯ ಟಿಕೆಟ್‍ಗಳ ಮೇಲೆ ಶೇ.12 ಹಾಗೂ 100 ರೂ. ಮೇಲ್ಪಟ್ಟ ಟಿಕೆಟ್ ದರ ಶೇ.18 ಎಂದು ನಿಗದಿ ಮಾಡಿದೆ ಕೇಂದ್ರ ಸರ್ಕಾರ. ಆದರೆ, ವಾಸ್ತವ ಪರಿಸ್ಥಿತಿ ಬೇರೆಯೇ ಇದೆ. ಹೊಸ ನೀತಿ ಜನವರಿ 1ರಿಂದಲೇ ಜಾರಿಗೆ ಬಂದಿದ್ದರೂ, ಅದರ ಲಾಭ ಪ್ರೇಕ್ಷಕರಿಗೆ ಸಿಗುತ್ತಿಲ್ಲ.
ಹಳೆಯ ಮುದ್ರಿತ ಟಿಕೆಟ್‍ಗಳನ್ನು ನೀಡಿದ್ದೇವೆ ಎಂಬ ಸಮುಜಾಯಿಷಿ ಬರುತ್ತಿದ್ದರೂ, ಜನವರಿ 1ರಿಂದ ನೂತನ ಜಿಎಸ್‍ಟಿ ಜಾರಿಗೆ ಬರಲಿದೆ ಎನ್ನುವುದು ಗುಟ್ಟಾಗಿರಲಿಲ್ಲ. ಸರ್ಕಾರ ಕೆಲವು ದಿನ ಮೊದಲೇ ಘೋಷಿಸಿತ್ತು. ಆ ಕುರಿತಂತೆ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ಬರುವಷ್ಟು ದಿನ ಬರಲಿ ಬಿಡಿ ಎಂದು ಶೇ.28ರ ಜಿಎಸ್‍ಟಿ ವಿಧಿಸಿಯೇ ಪ್ರೇಕ್ಷಕರನ್ನು ಸುಲಿಗೆ ಮಾಡಲಾಗುತ್ತಿದೆ ಎನ್ನುವುದು ಪ್ರೇಕ್ಷಕರ ದೂರು.