ಯೋಗರಾಜ್ ಭಟ್, ಗಾಳಿಪಟ 2 ಸಿನಿಮಾ ಮಾಡೋದಾಗಿ ಘೋಷಿಸಿಯೂ ಆಗಿದೆ. ಶರಣ್, ಲೂಸಿಯಾ ಪವನ್, ರಿಷಿ ನಾಯಕತ್ವದ ಗಾಳಿಪಟ 2 ಚಿತ್ರಕ್ಕೆ ಪಂಚತಂತ್ರ ಬಿಡುಗಡೆ ಟೈಮಿನಲ್ಲೇ ಕೆಲಸ ಶುರು ಮಾಡಿದ್ದಾರೆ. ಒಂದು ಚಿತ್ರ ಮುಗಿಯುತ್ತಿರುವಾಗಲೇ ಇನ್ನೊಂದು ಚಿತ್ರದಲ್ಲಿ ಬ್ಯುಸಿಯಾಗುತ್ತಿರುವುದು ಭಟ್ಟರ ಚರಿತ್ರೆಯಲ್ಲಿ ಇದೇ ಮೊದಲು ಎನ್ನಬೇಕು. ಈಗ ಆ ಚಿತ್ರಕ್ಕೆ ಇಬ್ಬರು ನಾಯಕಿಯರು ಓಕೆ ಆಗಿದ್ದಾರೆ.
ಶೃಂಗಾರದ ಹೊಂಗೆ ಮರದಲ್ಲಿ ಹೂ ಬಿಟ್ಟಿದ್ದ ಚೆಲುವೆ ಸೋನಾಲ್ ಓಕೆ ಆಗಿದ್ದಾರೆ. ಇನ್ನೊಂದು ಪಾತ್ರಕ್ಕೆ ಶರ್ಮಿಳಾ ಮಾಂಡ್ರೆ ಜೊತೆ ಮಾತುಕತೆ ನಡೆದಿದೆ. ಬೆಳಗಾವಿ ಮೂಲದ ಮಹೇಶ್ ಎಂಬುವರು ನಿರ್ಮಿಸುತ್ತಿರುವ ಗಾಳಿಪಟ 2ಗೆ ಸಂಗಿತ ಸಂಯೋಜನೆಗೆ ರೆಡಿಯಾಗಿದ್ಧಾರೆ ಭಟ್ಟರು.
ಇದು ಕಂಪ್ಲೀಟ್ ನನ್ನ ಶೈಲಿಯ ಸಿನಿಮಾ. ಮನರಂಜನೆ ಮತ್ತು ಭಾವನಾತ್ಮಕ ಅಂಶಗಳನ್ನು ಹದವಾಗಿ ಬೆರೆಸಿರುವ ಸಿನಿಮಾ. ಈಗಿನ ಜನರೇಷನ್ಗೆ ಇಷ್ಟವಾಗುವ ಸಿನಿಮಾ ಎಂದಿದ್ದಾರೆ ಭಟ್ಟರು.