` ಡ್ಯಾನ್ಸ್ ವಿತ್ ಅಪ್ಪು.. ನಟಸಾರ್ವಭೌಮನ ಚಾಲೆಂಜ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
natasarvabhouma's dance with appu challenge
Dance With Appu Challenge

ಪುನೀತ್ ರಾಜ್‍ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರತಂಡ ಅಭಿಮಾನಿಗಳಿಗೆ ಹೊಸದೊಂದು ಸ್ಪರ್ಧೆಯೊಡ್ಡಿದೆ. ಚಿತ್ರದ ಟ್ರೇಲರ್‍ನಲ್ಲಿ ಪುನೀತ್ ಮಾಡಿರುವ ಡ್ಯಾನ್ಸ್ ಸ್ಟೆಪ್‍ನ್ನು #Dancewihthappu ಮಾಡಿ ಅಪ್‍ಲೋಡ್ ಮಾಡುವಂತೆ ಚಾಲೆಂಜ್ ಹಾಕಿದೆ. ಇದು #Dancewihthappu... ಡ್ಯಾನ್ಸ್‍ವಿತ್‍ಅಪ್ಪು ಚಾಲೆಂಜ್. 

ಪುನೀತ್ ನೆಲದ ಮೇಲೆ ಒಂದು ಕೈ ಊರಿಕೊಂಡು, ಜಾರಿಕೊಂಡು ಹೋಗುತ್ತಾ ಡ್ಯಾನ್ಸ್ ಮಾಡುವ ಸ್ಟೆಪ್‍ನ್ನು ಅಭಿಮಾನಿಗಳು ಮಾಡಬೇಕು. ಇದು ಪುನೀತ್ ರಾಜ್‍ಕುಮಾರ್ ಅವರೇ ಅಭಿಮಾನಿಗಳಿಗೆ ನೀಡಿರುವ ಟಾಸ್ಕ್. #Dancewihthappu

ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ನಟಸಾರ್ವಭೌಮ ಚಿತ್ರಕ್ಕೆ ಪವನ್ ಒಡೆಯರ್ ನಿರ್ದೇಶನವಿದೆ. ರಚಿತಾ ರಾಮ್, ಅನುಪಮಾ ಪರಮೇಶ್ವರನ್ ಹಾಗೂ ಬಿ.ಸರೋಜಾದೇವಿ ನಟಿಸಿರುವ ಚಿತ್ರ ಫೆಬ್ರವರಿಯಲ್ಲಿ ರಿಲೀಸ್ ಆಗುತ್ತಿದೆ.

Kaalidasa Kannada Mestru Movie Gallery

Kabza Movie Launch Gallery