ಸಿಂಪಲ್ ಸುನಿ ನಿರ್ದೇಶನದ ಬಜಾರ್, ಜನವರಿ 11ಕ್ಕೆ ತೆರೆಗೆ ಬರುತ್ತಿದೆ. ಹೊಸ ಪ್ರತಿಭೆ ಧನ್ವೀರ್ ನಾಯಕರಾಗಿರುವ ಚಿತ್ರದಲ್ಲಿ ಪಾರಿವಾಳಗಳ ರೇಸ್ ಸ್ಟೋರಿ ಎತ್ತಿಕೊಂಡಿದ್ದಾರೆ ಸುನಿ. ಸುನಿ ಇದುವರೆಗೆ ನಿರ್ದೇಶಿಸಿರುವ ಹೊಸಬರ ಚಿತ್ರಗಳೆಲ್ಲ ಸೂಪರ್ ಹಿಟ್. ಹೀಗಾಗಿ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇದೆ.
ಜನವರಿ 11ಕ್ಕೆ ಚಿತ್ರವನ್ನು ತೆರೆಗೆ ತರುತ್ತಿದ್ದು, ಜನವರಿ 3ಕ್ಕೆ ಚಿತ್ರದ ಇನ್ನೊಂದುಟ್ರೇಲರ್ ಬಿಡುಗಡೆ ಮಾಡಲಿದ್ದಾರೆ. ಚಿತ್ರಕ್ಕೆ ರವಿ ಬಸ್ರೂರು ಸಂಗೀತ ನಿರ್ದೇಶನವಿದ್ದು, ಆದಿತಿ ಪ್ರಭುದೇವ ಚಿತ್ರದ ನಾಯಕಿ.