ಕೆಜಿಎಫ್, ಆಲ್‍ಮೋಸ್ಟ್.. ಇಡೀ ಜಗತ್ತನ್ನು ಆವರಿಸಿಕೊಂಡಿದೆ. ಭಾರತ, ಅಮೆರಿಕ, ಬ್ರಿಟನ್, ಆಸ್ಟ್ರೇಲಿಯ, ಏಷ್ಯಾದ ಇನ್ನಿತರ ರಾಷ್ಟ್ರಗಳು.. ಎಲ್ಲೆಡೆ ರಿಲೀಸ್ ಆಗಿ ಅದ್ಭುತವಾಗಿ ಗೆದ್ದಿದೆ. 100 ಕೋಟಿ ಕ್ಲಬ್ ಸೇರಿದೆ. ಈಗ ಅದೇ ಸಿನಿಮಾವನ್ನು ಇನ್ನೂ ದೊಡ್ಡ ಮಟ್ಟದಲ್ಲಿ ಚೀನಾದಲ್ಲಿ ರಿಲೀಸ್ ಮಾಡೋಕೆ ಸಿದ್ಧರಾಗಿದ್ದಾರೆ ವಿಜಯ್ ಕಿರಗಂದೂರು.
`ಈಗಾಗಲೇ ಮಾತುಕತೆ ನಡೆಯುತ್ತಿದೆ. ಚೀನಾದಲ್ಲಿ ರಿಲೀಸ್ ಮಾಡೋಕೆ ಅಲ್ಲಿನ ಸರ್ಕಾರ ಸಿನಿಮಾ ನೋಡಿ ಒಪ್ಪಿಗೆ ಕೊಡಬೇಕು. ಪ್ರಯತ್ನಗಳು ಶುರುವಾಗಿವೆ. ಎಲ್ಲವೂ ಅಂದುಕೊಂಡಂತೆ ಆದರೆ, ಹೊಸ ವರ್ಷದ ಆರಂಭದಲ್ಲೇ ಕೆಜಿಎಫ್, ಚೀನಾದಲ್ಲಿ ರಿಲೀಸ್ ಆಗಲಿದೆ'' ಎಂದಿದ್ದಾರೆ ವಿಜಯ್ ಕಿರಗಂದೂರು.
ವರ್ಷಕ್ಕೆ ಕೆಜಿಎಫ್‍ನಂತಹ ನಾಲ್ಕೈದು ಸಿನಿಮಾಗಳಾದರೂ ಆದರೆ, ಪರಭಾಷೆ ಸಿನಿಮಾಗಳ ಮುಂದೆ ನಾವೇನು ಎಂದು ತೋರಿಸಿಕೊಳ್ಳೋಕೆ ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ ವಿಜಯ್ ಕಿರಗಂದೂರು.