ಕೆಜಿಎಫ್ ಸೃಷ್ಟಿಸಿರುವ ಹವಾ, ಅಬ್ಬರ ನೋಡಿದರೆ, ಗಾಂಧಿನಗರದಲ್ಲಿ ಹರಿದಾಡುತ್ತಿರುವ ಸುದ್ದಿಗಳನ್ನು ನೋಡಿದರೆ, ಯಶ್.. ಇನ್ನು ಮುಂದೆ ಕನ್ನಡಿಗರ ಕೈಗೆ ಸಿಕ್ಕೋದಿಲ್ವಾ..? ಕನ್ನಡ ಚಿತ್ರರಂಗದ ಹೊರಗೆ ದೊಡ್ಡ ಹೆಜ್ಜೆ ಇಟ್ಟಿರುವ ಯಶ್, ಕನ್ನಡಿಗರ ಪಾಲಿಗೆ ನಿಲುಕದ ನಕ್ಷತ್ರವಾಗಿಬಿಡ್ತಾರಾ..? ಹಿಂದಿ, ತೆಲುಗು, ತಮಿಳಿನಲ್ಲಿ ಸೃಷ್ಟಿಯಾಗಿರುವ ಬೇಡಿಕೆ ನೋಡಿದ್ರೆ, ಅಂಥದ್ದೊಂದು ಆತಂಕ ಇದ್ದೇ ಇತ್ತು. ಅದೆಲ್ಲವನ್ನೂ ಯಶ್ ತಳ್ಳಿ ಹಾಕಿಬಿಟ್ಟಿದ್ದಾರೆ.
ಬೇರೆ ಭಾಷೆಗೆ ಹೋಗಬೇಕು ಎಂದಿದ್ದರೆ, ಯಾವತ್ತೋ ಹೋಗಬಹುದಿತ್ತು. ಅದು ಅಗತ್ಯವಿಲ್ಲ. ನಾನು ಕನ್ನಡದಲ್ಲಿಯೇ ಇರುತ್ತೇನೆ. ಕನ್ನಡದಲ್ಲಿದ್ದುಕೊಂಡೇ ಎಲ್ಲರೂ ಮೆಚ್ಚುವ ಸಿನಿಮಾ ಮಾಡುತ್ತೇನೆ. ನಾವು ಕನ್ನಡ ಸಿನಿಮಾವನ್ನೇ ಆಲ್ ಇಂಡಿಯಾ ಸಿನಿಮಾ ಆಗಿಸುವ ಹಂತದಲ್ಲಿದ್ದೇವೆ ಎಂದಿದ್ದಾರೆ ಯಶ್.
ನಾವು ಮಾಡಿದ್ದು 10 ರೂಪಾಯಿಯಷ್ಟು ಕೆಲಸ, ಕನ್ನಡಿಗರು ನೀಡಿದ್ದು 100 ರೂಪಾಯಿಯ ಆಶೀರ್ವಾದ. ನಾನು ಧನ್ಯ ಎಂದಿದ್ದಾರೆ ಯಶ್.