ಕನ್ನಡದಲ್ಲಿ ಪ್ರೇಮ, ಕಾಮದ ಚಿತ್ರಗಳಿಗೇನೂ ಬರವಿಲ್ಲ. ಗೆದ್ದಿರುವುದು ಕಡಿಮೆ. ಮುಖ್ಯವಾಹಿನಿಯಲ್ಲಿ ಬಂದಿರುವುದೂ ಕಡಿಮೆ. ಆದರೆ, ಸಲಿಂಗ ಪ್ರೇಮ, ಕಾಮದ ಕುರಿತು ಚಿತ್ರಗಳೇ ಇಲ್ಲ ಎನ್ನಬೇಕು. ಅಂಥಾದ್ದೊಂದು ಸಾಹಸಕ್ಕೆ ಕೈ ಹಾಕಿರುವ ಟೇಶಿ ವೆಂಕಟೇಶ್, ಬೆಸ್ಟ್‍ಫ್ರೆಂಡ್ಸ್ ಅನ್ನೋ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಅದು ಲೆಸ್ಬಿಯನ್ಸ್ ಲವ್ ಸ್ಟೋರಿ.
ಹಾಸನದಲ್ಲಿ ಒಂದು ಘಟನೆ ನಡೆದಿತ್ತು. 2012ರಲ್ಲಿ ಯುವತಿಯೊಬ್ಬಳು, ತನ್ನ ಗೆಳತಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಜೈಲು ಸೇರಿದ್ದಳು. ಆಕೆ ಈಗಲೂ ಜೈಲಿನಲ್ಲಿಯೇ ಇದ್ದಾಳೆ. ಆ ಇಬ್ಬರ ನಡುವೆ ಇದ್ದದ್ದು ಪ್ರೇಮ.
ಆ ಲೆಸ್ಬಿಯನ್ಸ್ ಲವ್ ಸ್ಟೋರಿಯನ್ನಿಟ್ಟುಕೊಂಡೆ ಚಿತ್ರದ ಕಥೆ ಮಾಡಿದ್ದೇವೆ ಅಂತಾರೆ ಟೇಶಿ ವೆಂಕಟೇಶ್. ಮೇಘನಾ ಮತ್ತು ದ್ರವ್ಯಾ ಶೆಟ್ಟಿ ಎಂಬ ಹುಡುಗಿಯರು ಚಿತ್ರದ ನಾಯಕಿಯರಾಗಿ ಕೆಲಸ ಮಾಡಿದ್ದಾರೆ. ಲಯನ್ ವೆಂಕಟೇಶ್ ನಿರ್ಮಾಣದ ಚಿತ್ರ ಮುಂದಿನ ವಾರ ತೆರೆಗೆ ಬರುತ್ತಿದೆ.