ಕೆಜಿಎಫ್ ಸಿನಿಮಾ, ಯಾವ ನಿರೀಕ್ಷೆಯನ್ನೂ ಹುಸಿ ಮಾಡಲಿಲ್ಲ. ಹೇಳಿದಂತೆಯೇ ಭಾರತದ ಮೂಲೆ ಮೂಲೆಯನ್ನೂ ತಲುಪಿದೆ. ದಾಖಲೆಗಳ ಮೇಲೆ ದಾಖಲೆಯನ್ನು ಚಿಂದಿ ಮಾಡುತ್ತಿದೆ. ಈಗ 100 ಕೋಟಿ ಕ್ಲಬ್‍ನ್ನೂ ಸೇರಿದೆ ಕೆಜಿಎಫ್.
ಮೂಲಗಳ ಪ್ರಕಾರ, ಕನ್ನಡದಲ್ಲಿಯೇ ಕೆಜಿಎಫ್ ಗಳಿಗೆ 50 ಕೋಟಿ ದಾಟಿದೆ. ತೆಲುಗಿನಲ್ಲಿ 8 ಕೋಟಿ, ತಮಿಳಿನಲ್ಲಿ 6 ಕೋಟಿ, ಹಿಂದಿಯಲ್ಲಿ 20 ಕೋಟಿ, ಮಲಯಾಳಂನಲ್ಲಿ 3 ಕೋಟಿ ಬ್ಯುಸಿನೆಸ್ ಮಾಡಿದೆ ಕೆಜಿಎಫ್. ವಿದೇಶಗಳಲ್ಲಿಯೂ ಕೆಜಿಎಫ್‍ನ ಗಳಿಕೆ 20 ಕೋಟಿ ಸಮೀಪಿಸಿದ್ದು, 100 ಕೋಟಿ ಕ್ಲಬ್ ಸೇರಿದ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿದೆ ಕೆಜಿಎಫ್.
ಇದು ಎಷ್ಟು ಪಕ್ಕಾ ಲೆಕ್ಕ ಅನ್ನೋದನ್ನು ನಿರ್ಮಾಪಕ ವಿಜಯ್ ಕಿರಗಂದೂರು ಅವರೇ ಸ್ಪಷ್ಟಪಡಿಬೇಕಿದೆ.