ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 35ನೇ ಸಿನಿಮಾದ ಟೈಟಲ್ ರಾಬರ್ಟ್. ಹೆಸರಷ್ಟೇ ರಾಬರ್ಟ್. ಪೋಸ್ಟರ್‍ನಲ್ಲಿರೋದು ಆಂಜನೇಯ.. ಶ್ರೀರಾಮ.. ಭಗವಾ ಧ್ವಜ.. ಇದು ತರುಣ್ ಸುಧೀರ್ ನಿರ್ದೇಶನದ ಉಮಾಪತಿ ನಿರ್ಮಾಣದ ಸಿನಿಮಾ. ಕ್ರಿಸ್‍ಮಸ್‍ಗೆಂದೇ ಚಿತ್ರದ ಟೈಟಲ್ ಹೊರಬಿಟ್ಟ ಚಿತ್ರತಂಡ, ದರ್ಶನ್ ಹುಟ್ಟುಹಬ್ಬಕ್ಕೆ ಫಸ್ಟ್‍ಲುಕ್ ರಿಲೀಸ್ ಮಾಡಲಿದೆಯಂತೆ.
ಇನ್ನು ಚಿತ್ರದಲ್ಲಿ ದರ್ಶನ್ ಜೊತೆಗೆ ಬಾಲಿವುಡ್ ಸ್ಟಾರ್ ನಟರೊಬ್ಬರು ನಟಿಸುತ್ತಿದ್ದು, ಅವರು ಯಾರು ಎನ್ನುವುದನ್ನು ಶೀಘ್ರದಲ್ಲಿಯೇ ತಿಳಿಸೋದಾಗಿ ತರುಣ್ ಸುಧೀರ್ ಹೇಳಿದ್ದಾರೆ.