ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ... ನಾಚಿಕೆಯು ನಮ್ಮ ಜೊತೆ ಠೂ ಬಿಟ್ಟಿದೆ.. ಯೋಗರಾಜ್ ಭಟ್ಟರ ಈ ಶೃಂಗಾರ ಕವಿತೆ ಹಾಡಾಗಿದೆ. ಕನಸಾಗಿದೆ. ಹದಿ ಹರೆಯದ ಮನಸ್ಸುಗಳಿಗೆ ಕಿಚ್ಚಿಟ್ಟಿದೆ. ಕನಸುಗಳು ಮೊಗ್ಗಾಗಿವೆ. ನಾಳೆ ಹೂ ಬಿಡಬೇಕು.
ಪಂಚತಂತ್ರ ಚಿತ್ರದ ಈ ಹಾಡಿಗೆ ಧ್ವನಿಯಾಗಿರುವುದು ವಿಜಯ್ ಪ್ರಕಾಶ್. ಡಿ ಬೀಟ್ಸ್‍ನಲ್ಲಿ ನಾಳೆ ಹಾಡನ್ನು ಚಿತ್ರರಸಿಕರಿಗೆ ಕೇಳಿಸಲಿದ್ದಾರೆ ಭಟ್ಟರು. ಹಾಡು ಕೇಳಿದ ಮೇಲೆ ಪ್ರೇಮಿಗಳು ನಾಚಿಕೆ ಬಿಟ್ಟು ಹೂ ಬಿಡಿಸೋಕೆ ಹೋಗೋದು ಗ್ಯಾರಂಟಿ. ಕಿವಿಗೆ ಶೃಂಗಾರ ತುಂಬಿಕೊಳ್ಳೋಕೆ ಸಿದ್ಧರಾಗಿ.