ಕೆಜಿಎಫ್, ಕನ್ನಡ ಚಿತ್ರರಂಗದ ಮೊದಲ 100 ಕೋಟಿ ಕ್ಲಬ್ ಸೇರಿದ ಚಿತ್ರವಾಗುತ್ತಾ..? ಸದ್ಯದ ಮಟ್ಟಿಗಂತೂ ಕೆಜಿಎಫ್ ಆ ದಾಖಲೆಯನ್ನೂ ಬರೆಯುವ ಮುನ್ಸೂಚನೆ ಕೊಟ್ಟಿದೆ. ಚಿತ್ರದ ಕಲೆಕ್ಷನ್ ಹಾಗಿದೆ.
ಕೆಜಿಎಫ್ ದೇಶಾದ್ಯಂತ 3 ದಿನದಲ್ಲೇ 60 ಕೋಟಿ ಕಲೆಕ್ಷನ್ ದಾಟಿದೆಯಂತೆ. ಮೊದಲ ದಿನ 24-25 ಕೋಟಿ ಕಲೆಕ್ಷನ್ ಮಾಡಿದ್ದರೆ, ನಂತರ ಎರಡು ದಿನ 20+ ಕೋಟಿ ಕಲೆಕ್ಷನ್ ಆಗಿದೆ.
ಹಿಂದಿ ಕೆಜಿಎಫ್ ಗಳಿಕೆ ಮೊದಲ ದಿನ ಮುಂಬೈನಲ್ಲಿ 2 ಕೋಟಿ ದಾಟಿದ್ದರೆ, 2ನೇ ದಿನ 3 ಕೋಟಿ ಹಾಗೂ 3ನೇ ದಿನ 5 ಕೋಟಿ ದಾಟಿದೆ. ಅಂದರೆ, ದಿನೇ ದಿನೇ ಹಿಂದಿಯ ಗಳಿಕೆ ಏರುತ್ತಿದೆ.
ತಮಿಳಿನಲ್ಲಿ ಕಲೆಕ್ಷನ್ ಚೆನ್ನಾಗಿದ್ದು, ಚಿತ್ರಮಂದಿರಗಳ ಸಂಖ್ಯೆ ಹೆಚ್ಚಿಸಲಾಗಿದೆ.
ಕೆಜಿಎಫ್ ಒಟ್ಟು 2450 ಸ್ಕ್ರೀನ್‍ಗಳಲ್ಲಿ ಪ್ರದರ್ಶನವಾಗುತ್ತಿದ್ದು, ಜನರ ಮೆಚ್ಚುಗೆಯಲ್ಲಿ ಆಗಲೇ 100 ಕೋಟಿ ಕ್ಲಬ್ ಸೇರಿ ಆಗಿದೆ.