` ಕೆಜಿಎಫ್ ಜೊತೆಯಲ್ಲೇ ಶಿವಣ್ಣ, ಅಪ್ಪು ಕಿಕ್ - chitraloka.com | Kannada Movie News, Reviews | Image

User Rating: 1 / 5

Star activeStar inactiveStar inactiveStar inactiveStar inactive
 
natasarvabhouma, kavacha teaser - trailer during kgf
Natasarvabhouma, Kavacha

ಕೆಜಿಎಫ್ ರಿಲೀಸ್ ಆದ ದಿನ ಥಿಯೇಟರಿಗೆ ಅಕ್ಷರಶಃ ನುಗ್ಗಿ ಚಿತ್ರವನ್ನು ಕಣ್ತುಂಬಿಕೊಂಡ ಚಿತ್ರರಸಿಕರಿಗೆ ಇನ್ನೆರಡು ಗಿಫ್ಟ್‍ಗಳೂ ಜೊತೆಯಲ್ಲಿದ್ದವು. ಒಂದು ಶಿವರಾಜ್‍ಕುಮಾರ್ ಅವರದ್ದು. ಇನ್ನೊಂದು ಪುನೀತ್ ರಾಜ್‍ಕುಮಾರ್‍ದು.

ಮುಂದಿನ ತಿಂಗಳು ರಿಲೀಸ್‍ಗೆ ರೆಡಿಯಾಗಿರುವ ಕವಚ ಚಿತ್ರದ ಟ್ರೇಲರ್‍ನ್ನು ಕೆಜಿಎಫ್ ಜೊತೆಯಲ್ಲಿಯೇ ರಿಲೀಸ್ ಮಾಡಲಾಗಿದೆ. ಶಿವಣ್ಣ ಮೊದಲ ಬಾರಿಗೆ ಅಂಧನಾಗಿ ನಟಿಸಿರುವ, 14 ವರ್ಷಗಳ ನಂತರ ರೀಮೇಕ್‍ನಲ್ಲಿ ನಟಿಸಿರುವ ಚಿತ್ರ ಕವಚ.

ಇನ್ನು ಪುನೀತ್ ರಾಜ್‍ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರದ ಟೀಸರ್ ಕೂಡಾ ಕೆಜಿಎಫ್ ಜೊತೆಯಲ್ಲೇ ಹೊರಬಂದಿದೆ. ಡ್ಯಾನ್ಸ್ ವಿತ್ ಅಪ್ಪು ಎಂಬ ಹಾಡಿನಲ್ಲಿ ಅಪ್ಪು ಮತ್ತೊಮ್ಮೆ ಮೈನವಿರೇಳಿಸುವ ಸ್ಟೆಪ್ ಹಾಕಿದ್ದಾರೆ. ಪವನ್ ಒಡೆಯರ್ ನಿರ್ದೇಶನದ ಚಿತ್ರಕ್ಕೆ ರಾಕ್‍ಲೈನ್ ವೆಂಕಟೇಶ್ ನಿರ್ಮಾಪಕ.