` ಯಶ್ ಅಮ್ಮ... ಯಶ್‍ಗಿಂತ ಚಿಕ್ಕೋರು ಕಣ್ರಿ..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
interesting story about rocky bhai's mother in kgf
Archana In KGF

ಕೆಜಿಎಫ್ ಚಿತ್ರದ ಟ್ರೇಲರ್ ನೋಡಿದವರಿಗೆ ಗಮನ ಸೆಳೆಯೋದು ಅಮ್ಮ. ಆಕೆ ಯಶ್‍ಗೆ ಹೇಳೋ ಡೈಲಾಗ್... ಮೈ ನವಿರೇಳಿಸುವುದು ನಿಜ.

ನಿನ್ನ ಬೆನ್ನ ಹಿಂದೆ ಸಾವಿರ ಜನ ನಿಂತಿದ್ಧಾರೆ ಅನ್ನೋ ಧೈರ್ಯ ನಿನಗೆ ಇದ್ರೆ, ಬರೀ ಒಂದು ಯುದ್ಧ ಗೆಲ್ಲಬಹುದು. ಅದೇ.. ನೀನು ಮುಂದೆ ನಿಂತಿದ್ದೀಯಾ ಅನ್ನೋ ಧೈರ್ಯ ಸಾವಿರ ಜನಕ್ಕೆ ಬಂದ್ರೆ, ನೀನು ಪ್ರಪಂಚಾನೇ ಗೆಲ್ಲಬಹುದು.

ಅದು ಕೆಜಿಎಫ್‍ನಲ್ಲಿ ಯಶ್‍ಗೆ ತಾಯಿ ಹೇಳೋ ಮಾತು. ಇಂತಹ ಮಾತನ್ನಾಡಿರುವ, ಯಶ್‍ಗೆ ತಾಯಿಯಾಗಿ ನಟಿಸಿರುವ ನಟಿ ಅರ್ಚನಾ ಜೋಯಿಸ್. ವಿಶೇಷ ಅಂದ್ರೆ, ಆಕೆ ವಯಸ್ಸಿನಲ್ಲಿ ಯಶ್‍ಗಿಂತ ಚಿಕ್ಕವರಂತೆ. ಮಹಾದೇವಿ ಅನ್ನೋ ಸೀರಿಯಲ್‍ನಲ್ಲಿ ತ್ರಿಪುರ ಸುಂದರಿ ದೇವಿಯ ಪಾತ್ರ ಮಾಡಿದ್ದ ಅರ್ಚನಾ, ದುರ್ಗಾ ಧಾರಾವಾಹಿಯಲ್ಲೂ ದೇವಿಯ ಪಾತ್ರದಲ್ಲೇ ನಟಿಸಿದ್ದರು. ನೀಲಿ ಅನ್ನೋ ಸೀರಿಯಲ್‍ನಲ್ಲೂ ಪ್ರಮುಖ ಪಾತ್ರ ಮಾಡಿದ್ದರು. ಇಷ್ಟಿದ್ದರೂ ಅರ್ಚನಾಗೆ ಭರತ ನಾಟ್ಯ ಎಂದರೆ ಪಂಚಪ್ರಾಣ. ಭರತನಾಟ್ಯಕ್ಕಾಗಿ ದೊಡ್ಡ ದೊಡ್ಡ ಅವಕಾಶಗಳನ್ನು ಕೈಚೆಲ್ಲಿರುವ ಅರ್ಚನಾ ಜೋಯಿಸ್, ರಾಷ್ಟ್ರೀಯ ಮಟ್ಟದ ನಾಟ್ಯ ಕಲಾವಿದೆ. ಇವರ ಪತಿ ಶ್ರೇಯಸ್ ಉಡುಪ. ಲವ್ ಮ್ಯಾರೇಜ್.

ಅರ್ಚನಾ ಅವರಿಗೆ ಶಾರೂಕ್, ಅಮೀರ್ ಖಾನ್, ಯಶ್ ಮತ್ತು ಪ್ರಭಾಸ್ ಎಂದರೆ ತುಂಬಾ ಇಷ್ಟ. ಈಗ ಯಶ್‍ಗೆ ಕೆಜಿಎಫ್‍ನಲ್ಲಿ ಅಮ್ಮನಾಗಿ ನಟಿಸಿ ಗೆದ್ದಿದ್ದಾರೆ.