ನಾನು ಸಿನಿಮಾದ ಹೀರೋ. ಆದರೆ, ಚಿತ್ರದಲ್ಲಿ ನಾನೊಂದು ಮುಖವೇ ಹೊರತು, ನಾನೇ ಎಲ್ಲ ಅಲ್ಲ. ಚಿತ್ರದ ಹೀರೋಗಳು ಹಲವರಿದ್ದಾರೆ. ಇದು ಯಶ್ ಕೆಜಿಎಫ್ ಚಿತ್ರದ ಬಗ್ಗೆ ಹೇಳಿರುವ ಮತ್ತೊಂದು ಮಾತು.
ಚಿತ್ರದ ನಿಜವಾದ ಹೀರೋ ನಿರ್ಮಾಪಕ ವಿಜಯ್ ಕಿರಗಂದೂರು. ಅವರು ಧೈರ್ಯ ಮಾಡದೇ ಇದ್ದರೆ ಈ ಸಿನಿಮಾ ಆಗುತ್ತಿರಲಿಲ್ಲ. ಇನ್ನು ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್, ಕನ್ನಡ ಚಿತ್ರರಂಗದ ಆಸ್ತಿ. ಛಾಯಾಗ್ರಹಕ ಭುವನ್ ಗೌಡ, ಕಲಾ ನಿರ್ದೇಶಕ ಶಿವಕುಮಾರ್, ಸಂಗೀತ ನಿರ್ದೇಶಕ ರವಿ ಬಸ್ರೂರು, ಎಫೆಕ್ಟ್ ರಾಜನ್, ಉದಯ ರವಿ... ಅಷ್ಟೇ ಏಕೆ, ಸೆಟ್ನಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರೂ ಚಿತ್ರದ ಹೀರೋಗಳು. ನಾನು ಜಸ್ಟ್ ಮುಖ ಮಾತ್ರ ಎಂದು ಕ್ರೆಡಿಟ್ನ್ನು ಇಡೀ ಚಿತ್ರತಂಡಕ್ಕೆ ಅರ್ಪಿಸಿದ್ದಾರೆ ಯಶ್.