ಬಿಲ್ಲಾ ರಂಗಾ.. ಈ ಹೆಸರು ಕೇಳಿದರೆ ಥಟ್ಟನೆ ನೆನಪಿಗೆ ಬರೋದು ರಜನಿಕಾಂತ್. ಅದು 1980ರಲ್ಲಿ ತಮಿಳಿನಲ್ಲಿ ರಿಲೀಸ್ ಆಗಿದ್ದ ಸಿನಿಮಾ. ಡಾನ್ ಚಿತ್ರದ ರೀಮೇಕ್ ಆಗಿದ್ದರೂ, ಅದನ್ನು ತಮ್ಮ ಸ್ಟೈಲ್‍ನಿಂದಲೇ ಮರೆಮಾಚಿಸಿಬಿಟ್ಟಿದ್ದರು ರಜನಿ. ತೆಲುಗಿನಲ್ಲಿ ಬಿಲ್ಲಾ ರಂಗಾ ಅನ್ನೋ ಹೆಸರಲ್ಲಿ ಚಿರಂಜೀವಿ ನಟಿಸಿದ್ದರು.
ಕೆಲವು ವರ್ಷಗಳ ಹಿಂದೆ ಅದೇ ಚಿತ್ರವನ್ನು ತೆಲುಗಿನಲ್ಲಿ ಪ್ರಭಾಸ್, ತಮಿಳಿನಲ್ಲಿ ಅಜಿತ್ ಮತ್ತೊಮ್ಮೆ ಮಾಡಿದ್ದರು. ಆಗಲೂ ಚಿತ್ರಗಳು ಸೂಪರ್ ಹಿಟ್. ಇನ್ನು ಭಾಷಾ ಎಂದರೆ, ಅದು ರಜನಿಕಾಂತ್ ಮಾತ್ರ.
ಈಗ ಈ ಮೂರು ಹೆಸರುಗಳನ್ನೂ ಸೇರಿಸಿ ಹೊಸ ಚಿತ್ರದ ಟೈಟಲ್ ರೆಡಿಯಾಗಿದೆ. ಬಿಲ್ಲ ರಂಗ ಭಾಷಾ.
ಇದು ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನದ ಸಿನಿಮಾ. ಹೀರೋ ಕಿಚ್ಚ ಸುದೀಪ್. ನಿರ್ಮಾಪಕರೂ ಅವರೇ. ಪೈಲ್ವಾನ್, ಕೋಟಿಗೊಬ್ಬ 3 ಮುಗಿದ ನಂತರ ಬಿಲ್ಲ ರಂಗ ಭಾಷಾ ಚಿತ್ರದ ಚಿತ್ರೀಕರಣ ಶುರುವಾಗಲಿದೆ.
Related Articles :-