Print 
sudeep anup bandari

User Rating: 5 / 5

Star activeStar activeStar activeStar activeStar active
 
anup bhandari's next is with sudeep
Sudeep, Anup Bhandari

ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ಹೊಸ ಚಿತ್ರಕ್ಕೆ ಕೈ ಹಾಕಿದ್ದಾರೆ. ಈ ಬಾರಿ ಸ್ಟಾರ್ ನಟ ಕಿಚ್ಚ ಸುದೀಪ್ ಅವರನ್ನು ನಿರ್ದೇಶಿಸಲಿದ್ದಾರೆ. ಸುದೀಪ್ ಸಿನಿಮಾ ನಿರ್ದೇಶಿಸಬೇಕು ಎನ್ನುವುದು ನನ್ನ 18 ವರ್ಷಗಳ ಕನಸು. ಆ ಕನಸು ನನಸಾಗುತ್ತಿದೆ. ನನ್ನ ಕಥೆಗೆ ಸುದೀಪ್ ಓಕೆ ಎಂದಿದ್ದಾರೆ. ತಾವೇ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ ಎಂದು ಥ್ರಿಲ್ಲಾಗಿದ್ದಾರೆ ಅನೂಪ್ ಭಂಡಾರಿ.

ಈ ಚಿತ್ರವನ್ನು ಸುದೀಪ್ ಅವರೇ ತಮ್ಮ ಸುಪ್ರಿಯಾನ್ವಿ ಬ್ಯಾನರ್‍ನಲ್ಲಿ ನಿರ್ಮಿಸುತ್ತಿದ್ದಾರೆ. ಸುಪ್ರಿಯಾನ್ವಿ ಎಂದರೆ ಸುದೀಪ್, ಪತ್ನಿ ಪ್ರಿಯಾ ಹಾಗೂ ಮಗಳು ಸಾನ್ವಿಯ ಶಾರ್ಟ್ ವರ್ಷನ್. ಚಿತ್ರ ನಿರ್ಮಾಣಕ್ಕೆ ಜಾಕ್ ಮಂಜು ಅವರ ಕೆಎಸ್‍ಕೆ ಶೋರೀಲ್ ಕೂಡಾ ಕೈ ಜೋಡಿಸಲಿದೆ.

ಅನೂಪ್ ಹೇಳಿದ ಕಥೆಯ ಒನ್‍ಲೈನ್ ತುಂಬಾ ಇಷ್ಟವಾಯಿತು. ಹೀಗಾಗಿ ನಾನೇ ನಿರ್ಮಿಸೋಣ ಎಂದು ನಿರ್ಧರಿಸಿದೆ ಎಂದಿದ್ದಾರೆ ಸುದೀಪ್. 

ನಾಳೆ ಅಂದ್ರೆ ಗುರುವಾಗ, ಚಿತ್ರದ ಟೈಟಲ್ ಬಿಡುಗಡೆಯಾಗಲಿದೆ. ಇದೊಂದು ಸಾಹಸ ಪ್ರಧಾನ ಚಿತ್ರವಾಗಿದ್ದು, ಉಳಿದ ವಿವರಗಳು ಮುಂದಿನ ದಿನಗಳಲ್ಲಿ ತಿಳಿಯಲಿವೆ ಎಂದಿದ್ದಾರೆ ಅನೂಪ್ ಭಂಡಾರಿ.