` ನನ್ನ ಹೊಟ್ಟೆ ಉರಿಯುವಂತೆ ಭರಾಟೆ ಹಿಟ್ ಆಗಬೇಕು - ದರ್ಶನ್ ಹಾರೈಕೆ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
darshan wishes sri murali in different way
Srimurali, Darshan

`ಸಾಮಾನ್ಯವಾಗಿ ನಾನು ಯಾರ ಚಿತ್ರವನ್ನು ನೋಡಿದರೂ ಹೊಟ್ಟೆ ಉರಿದುಕೊಳ್ಳಲ್ಲ. ಆದರೆ, ಉಗ್ರಂ ನೋಡಿದಾಗ ಹೊಟ್ಟೆ ಉರಿದಿತ್ತು. ಅದನ್ನು ಶ್ರೀಮುರಳಿಗೆ ಫೋನ್ ಮಾಡಿ ಹೇಳಿಕೊಂಡಿದ್ದಾರೆ. ಭರಾಟೆ ಚಿತ್ರವೂ ಅಷ್ಟೇ.. ನಾನು ಹೊಟ್ಟೆ ಉರಿದುಕೊಳ್ಳುವಷ್ಟು ಹಿಟ್ ಆಗಲಿ' ಭರಾಟೆ ಚಿತ್ರದ ಟ್ರೇಲರ್ ರಿಲೀಸ್ ವೇಳೆ ಚಾಲೆಂಜಿಂಗ್ ಸ್ಟಾರ್ ಇಂಥಾದ್ದೊಂದು ಮಾತು ಹೇಳಿದ್ದಾರೆ.

ಇಂಥಾದ್ದೊಂದು ವಿಶೇಷ ಹಾರೈಕೆ ಮಾಡಿದ ದರ್ಶನ್, ಭರಾಟೆ ಚಿತ್ರದ ನಿರ್ದೇಶಕ ಚೇತನ್‍ರನ್ನು ಹೊಗಳಿದ್ದಾರೆ. ಚೇತನ್‍ರದ್ದು ಮಾತು ಕಡಿಮೆ, ಕೆಲಸ ಜಾಸ್ತಿ. ಅವರ ಸಿನಿಮಾಗಳೆಲ್ಲವೂ ಹಿಟ್ ಆಗಿವೆ. ಭರಾಟೆಯೂ ಸೂಪರ್ ಹಿಟ್ ಆಗಲಿ ಎಂದು ಹಾರೈಸಿದ್ದಾರೆ ದರ್ಶನ್.

ಇನ್ನು ಮದಗಜ ಟೈಟಲ್ ವಿವಾದ ಕುರಿತಂತೆ ಮಾತನಾಡಿದ ದರ್ಶನ್, ಯಾರು ಮಾಡಿದರೂ ಅದು ಕನ್ನಡ ಸಿನಿಮಾ ತಾನೇ. ಇವರೇ ಮಾಡಬೇಕು ಅಂತಾ ಏನೂ ಇಲ್ಲ. ಚಿತ್ರರಂಗ ಇರೋದೇ ಹಾಗೆ ಎಂದಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery