ಪೈರಸಿ ವಿರುದ್ಧ ಸಮರವನ್ನೇ ಸಾರಲು ಹೊರಟಿರುವ ಕೆಜಿಎಫ್ ಚಿತ್ರತಂಡ, ಹೆಲ್ಪ್‍ಲೈನ್ ಆರಂಭಿಸಿರುವುದು ತಿಳಿದಿದೆಯಷ್ಟೇ. ಅಷ್ಟೇ ಅಲ್ಲ, 2000ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ರಿಲೀಸ್ ಆಗುತ್ತಿರುವ ಚಿತ್ರ, ಚಿತ್ರವನ್ನು ಪೈರೇಟ್ ಮಾಡುವವರ ವಿರುದ್ಧ ಹದ್ದಿನ ಕಣ್ಣಿಟ್ಟಿದೆ.
ಫೇಸ್‍ಬುಕ್ ಲೈವ್, ಥಿಯೇಟರುಗಳಲ್ಲಿ ಮೊಬೈಲ್, ಕ್ಯಾಮೆರಾಗಳಲ್ಲಿ ಚಿತ್ರೀಕರಣ ಮಾಡೋದು.. ತಪ್ಪು. ಯಾರೂ ಕಾನೂನು ಉಲ್ಲಂಘನೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ ಯಶ್. ಪೈರಸಿ ಆಗದಂತೆ ತಡೆಯುವ ಹೊಣೆಯನ್ನು ಖಾಸಗಿ ಏಜೆನ್ಸಿಯೊಂದಕ್ಕೆ ವಹಿಸಲಾಗಿದೆ.
ತಪ್ಪು ಮಾಡಿದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ. ತಪ್ಪು ಮಾಡಿ, ಅಣ್ಣಾ ನಾನು ನಿಮ್ಮ ಅಭಿಮಾನಿ ಎಂದರೆ, ಪೊಲೀಸರು ಸುಮ್ಮನಿರಲ್ಲ. ಒಳ್ಳೆಯ ಸಿನಿಮಾ ಮಾಡಿದರೆ, ಕನ್ನಡ ಚಿತ್ರರಂಗ ಏರುವ ಎತ್ತರವೇ ಬೇರೆ. ಕನ್ನಡ ತಲುಪುವ ಎತ್ತರವೇ ಬೇರೆ. ಮರೆಯಬೇಡಿ. ಸಹಕರಿಸಿ ಎಂದು ಕೇಳಿಕೊಂಡಿದ್ದಾರೆ ಯಶ್.