` ಕುರುಕ್ಷೇತ್ರ ಸೆನ್ಸಾರ್ ಆಯ್ತು.. - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
kurukshetra gets u/a certificate
Kurukshetra

ಚಾಲೆಂಜಿಂಗ್ ಸ್ಟಾರ್ ಅಭಿನಯದ ಮುನಿರತ್ನ ಕುರುಕ್ಷೇತ್ರ ಸೆನ್ಸಾರ್ ಆಗಿದೆ. ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಪೌರಾಣಿಕ ಚಿತ್ರಕ್ಕೆ ಯು/ಎ ಸಿಗುವುದಕ್ಕೆ ಕಾರಣ, ಚಿತ್ರದಲ್ಲಿರುವ ಯುದ್ಧದ ಸನ್ನಿವೇಶಗಳು. ಇದು ರೆಬಲ್‍ಸ್ಟಾರ್ ಅಂಬರೀಷ್ ಅಭಿನಯದ ಕೊನೆಯ ಚಿತ್ರವೂ ಹೌದು.

ಕನ್ನಡದಲ್ಲಿ ಸುದೀರ್ಘ ಅವಧಿಯ ನಂತರ ಪೌರಾಣಿಕ ಚಿತ್ರವೊಂದು, ದೊಡ್ಡ ಸ್ಟಾರ್‍ಗಳ ಜೊತೆಯಲ್ಲಿ ಅದ್ಧೂರಿಯಾಗಿ ಬರುತ್ತಿರುವುದು ವಿಶೇಷ. 3 ಗಂಟೆ 5 ನಿಮಿಷ ಅವಧಿಯ ಕುರುಕ್ಷೇತ್ರ ಬಹುಶಃ ಏಪ್ರಿಲ್‍ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ಆದರೆ, ಸೆನ್ಸಾರ್ ಮುಗಿದಿರುವ ಕಾರಣ, ಜನವರಿ ಅಂತ್ಯ ಅಥವಾ ಫೆಬ್ರವರಿಯಲ್ಲೇ ತೆರೆಗೆ ಬಂದರೂ ಆಶ್ಚರ್ಯವಿಲ್ಲ.