ಕೆಜಿಎಫ್ ಹವಾ ಇದೇ ಶುಕ್ರವಾರದಿಂದ ಆರಂಭ. ಆ ದಿನ ಬೆಂಗಳೂರಿನ ಹಲವಾರು ಥಿಯೇಟರುಗಳಲ್ಲಿ ಮುಂಜಾನೆಯೇ ಶೋ ಶುರುವಾಗಲಿದೆ. ಆ ದಿನ ಬೆಂಗಳೂರಿನ ಕಾಮಾಕ್ಯ, ಶಾರದಾ ಸಿನಿಮಾ, ತಿರುಮಲ ಡಿಜಿಟಲ್, ವಿನಾಯಕ್ ಸಿನಿಮಾಸ್‍ಗಳಲ್ಲಿ ಈಗಾಗಲೇ ಅಧಿಕೃತವಾಗಿಯೇ ಟಿಕೆಟ್ ಬುಕ್ ಆಗಿದ್ದು, ಆ ದಿನ ಬೆಳಗ್ಗೆ 6ಕ್ಕೇ ಶೋ ಶುರುವಾಗಲಿದೆ.
ಇನ್ನು ರಿಲೀಸ್ ದಿನ ಅಬ್ಬರ ಜೋರಾದರೆ, ಮಧ್ಯರಾತ್ರಿಯೇ ಶೋ ನಡೆದರೂ ಆಶ್ಚರ್ಯ ಪಡಬೇಕಿಲ್ಲ. ಬಳ್ಳಾರಿಯಲ್ಲಂತೂ ಇತ್ತೀಚೆಗೆ ಸ್ಟಾರ್ ಸಿನಿಮಾಗಳು ಅರ್ಧರಾತ್ರಿಯಲ್ಲೇ ರಿಲೀಸ್ ಆಗುವುದು ಈಗ ಕಾಮನ್ ಆಗಿಬಿಟ್ಟಿದೆ.
ಕೆಜಿಎಫ್ ದೇಶಾದ್ಯಂತ 2000+ ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ. ಬೆಂಗಳೂರಿನಲ್ಲಿ ಕನ್ನಡ ಅಷ್ಟೇ ಅಲ್ಲ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ವರ್ಷನ್ ಕೆಜಿಎಫ್ ಕೂಡಾ ರಿಲೀಸ್ ಆಗುತ್ತಿದೆ. ಕೆಜಿಎಫ್ ರಿಲೀಸ್‍ಗೇ ಕಾಯುತ್ತಿದ್ದೆವೇನೋ ಎಂಬಂತೆ ಅಭಿಮಾನಿಗಳು ಶೋ ಬುಕಿಂಗ್ ಆರಂಭವಾದ ಕೆಲವೇ ಗಂಟೆಗಳಲ್ಲಿ ಟಿಕೆಟ್ ಸೋಲ್ಡ್ ಔಟ್ ಮಾಡಿಬಿಟ್ಟಿದ್ದಾರೆ.