ಕೆಜಿಎಫ್ ಶೂಟಿಂಗ್ ಮುಗಿಸಿದ ನಂತರ ರಾಕಿಂಗ್ ಸ್ಟಾರ್ ಯಶ್ ತೊಡಗಿಸಿಕೊಂಡಿದ್ದ ಸಿನಿಮಾ ಮೈ ನೇಮ್ ಈಸ್ ಕಿರಾತಕ. ಅನಿಲ್ ಕುಮಾರ್ ನಿರ್ದೇಶನದ ಚಿತ್ರ, ಒಂದು ಹಂತದ ಶೂಟಿಂಗ್‍ನ್ನು ಕೂಡಾ ಮುಗಿಸಿದೆ. ಹೀಗಿರುವಾಗಲೇ, ಚಿತ್ರವನ್ನು ನಿಲ್ಲಿಸಿಬಿಟ್ಟಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹಬ್ಬಿಬಿಟ್ಟಿದೆ. ಅಫ್‍ಕೋರ್ಸ್.. ಹಾಗೆ ಸುದ್ದಿ ಹಬ್ಬೋಕೆ ಕಾರಣ, ಮೈ ನೇಮ್ ಈಸ್ ಕಿರಾತಕ ಚಿತ್ರದ ನಿರ್ದೇಶಕ ಅನಿಲ್ ಕುಮಾರ್, ರಾಮ್‍ಕುಮಾರ್ ಪುತ್ರ ಧಿರೇನ್ ಅಭಿನಯದ ದಾರಿ ತಪ್ಪಿದ ಮಗ ಚಿತ್ರವನ್ನು ಆರಂಭಿಸಿರುವುದು. ಹೀಗಾಗಿ ಗೊಂದಲಗಳಿಗೆ ಸ್ವತಃ ನಿರ್ಮಾಪಕ ಜಯಣ್ಣ ಉತ್ತರ ಕೊಟ್ಟಿದ್ದಾರೆ.
`ಮೈ ನೇಮ್ ಈಸ್ ಕಿರಾತಕ ನಿಂತಿಲ್ಲ. ಎಲ್ಲವೂ ಪ್ಲಾನ್ ಪ್ರಕಾರವಾಗಿಯೇ ನಡೆಯುತ್ತಿದೆ. ಯಶ್, ಈಗ ಕೆಜಿಎಫ್ ರಿಲೀಸ್‍ನಲ್ಲಿ ಬ್ಯುಸಿಯಾಗಿದ್ದಾರೆ. ನಮ್ಮ ಪ್ಲಾನ್ ಪ್ರಕಾರವೇ, ಚಿತ್ರದ ಚಿತ್ರೀಕರಣ ಜನವರಿ ಕೊನೆಯಲ್ಲಿ ಶುರುವಾಗಬೇಕು. ಒಂದು ಹಂತದ ಚಿತ್ರೀಕರಣ ಮುಗಿಸಿ, ಬ್ರೇಕ್ ತೆಗೆದುಕೊಂಡಿದ್ದೇವೆ. ರೂಮರ್‍ಗಳನ್ನು ನಂಬಬೇಡಿ'' ಇದು ಜಯಣ್ಣ ಕೊಟ್ಟಿರುವ ಉತ್ತರ.