ದರ್ಶನ್, ಒಂದರ ಹಿಂದೊಂದು ಚಿತ್ರದಲ್ಲಿ ಬ್ಯುಸಿಯಾಗುತ್ತಿದ್ದಾರೆ. 2019, ದರ್ಶನ್ ವರ್ಷವಾದರೆ ಆಶ್ಚರ್ಯವಿಲ್ಲ. ಕುರುಕ್ಷೇತ್ರ ರಿಲೀಸ್ಗೆ ರೆಡಿ. ಯಜಮಾನ ಫೈನಲ್ ಹಂತದಲ್ಲಿದೆ. ಒಡೆಯ ಚಿತ್ರೀಕರಣದಲ್ಲಿದೆ. ಹೀಗಿರುವಾಗಲೇ ದರ್ಶನ್ ರಾಬರ್ಟ್ ಚಿತ್ರಕ್ಕೆ ಚಾಲನೆ ಕೊಟ್ಟಿದ್ದಾರೆ. ತರುಣ್ ಸುಧೀರ್ ನಿರ್ದೇಶನದ ಚಿತ್ರದಲ್ಲಿ ದರ್ಶನ್ ಡಿಫರೆಂಟ್ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
53ನೇ ಸಿನಿಮಾದಲ್ಲಿ ದರ್ಶನ್ ಮತ್ತೊಮ್ಮೆ ಗಡ್ಡಧಾರಿಯಾಗಲಿದ್ದಾರೆ. ಈ ಮೊದಲು ಜಗ್ಗುದಾದ ಚಿತ್ರದಲ್ಲೂ ಗಡ್ಡಧಾರಿಯಾಗಿ ಮಿಂಚಿದ್ದ ದರ್ಶನ್, ರಾಬರ್ಟ್ ಚಿತ್ರಕ್ಕಾಗಿ ಗಡ್ಡ ಬಿಡಲಿದ್ದಾರಂತೆ.