ಮದಗಜ ಚಿತ್ರದ ಟೈಟಲ್ ವಿವಾದ ಕೊನೆಗೂ ಬಗೆಹರಿದಿದೆ. ಮದಗಜ ಚಿತ್ರದ ಫಸ್ಟ್‍ಲುಕ್‍ನ್ನು ಸ್ವತಃ ದರ್ಶನ್ ಅವರೇ ರಿಲೀಸ್ ಮಾಡಿ, ವಿವಾದಕ್ಕೆ ಅಂತ್ಯ ಹಾಡಿದ್ದಾರೆ. ಅದು ಗೆಳೆತನಕ್ಕೆ, ಶ್ರೀಮುರಳಿ ಹುಟ್ಟುಹಬ್ಬಕ್ಕೆ ದರ್ಶನ್ ನೀಡಿರುವ ಕಾಣಿಕೆ. ಮದಗಜ ಚಿತ್ರದ ನಿರ್ಮಾಪಕ ಉಮಾಪತಿ. ಒಂದಲ್ಲ..ಎರಡಲ್ಲ.. ಚಿತ್ರದ ನಂತರ ಉಮಾಪತಿ ನಿರ್ಮಿಸುತ್ತಿರುವ ಸಿನಿಮಾ ಮದಗಜ. ಅಯೋಗ್ಯ ನಂತರ ಮಹೇಶ್ ನಿರ್ದೇಶಿಸುತ್ತಿರುವ ಸಿನಿಮಾ ಮದಗಜ. ಸಂಕ್ರಾಂತಿ ನಂತರ ಚಿತ್ರದ ಚಿತ್ರೀಕರಣ ಶುರುವಾಗಲಿದೆ.
ಜನವರಿ 15ಕ್ಕೆ ಮದಗಜ ಚಿತ್ರಕ್ಕೆ ಮುಹೂರ್ತ ನಡೆಯಲಿದೆ. ನಾರ್ವೆ, ಜಾರ್ಜಿಯಾಗಳಲ್ಲಿ ಶೇ.40ರಷ್ಟು ಶೂಟಿಂಗ್. ರವಿಶಂಕರ್ ಮತ್ತು ಜಗಪತಿ ಬಾಬು ಚಿತ್ರದ ವಿಲನ್‍ಗಳು. ಅರ್ಜುನ್ ಜನ್ಯ ಮ್ಯೂಸಿಕ್, ಶ್ರೀಶ ಕ್ಯಾಮೆರಾ.. ಹೀಗೆ ಬಹುತೇಕ ಎಲ್ಲವೂ ಫಿಕ್ಸ್.
ನಾಯಕಿಯೂ ಫಿಕ್ಸ್. ಆದರೆ ಹೆಸರು ಹೇಳುತ್ತಿಲ್ಲ. ಕನ್ನಡದ ಬಹುಬೇಡಿಕೆಯ ನಟಿಯೊಬ್ಬರು ಚಿತ್ರದ ನಾಯಕಿಯಾಗುತ್ತಿದ್ದಾರೆ. ಪರಭಾಷೆ ನಟಿಯಂತೂ ಖಂಡಿತಾ ಅಲ್ಲ ಎಂದಿದ್ದಾರೆ ನಿರ್ದೇಶಕ ಮಹೇಶ್ ಕುಮಾರ್. ಯಾರದು.. ಊಹೆ ನಿಮಗೇ ಬಿಟ್ಟಿದ್ದು.