Print 
yash, kgf, srinidhi shetty,

User Rating: 3 / 5

Star activeStar activeStar activeStar inactiveStar inactive
 
srinidhi plays a role of girl with attitude in kgf
Srinidhi Shetty

ಕೆಜಿಎಫ್‍ನಲ್ಲಿ ಹೀರೋಯಿನ್ ಶ್ರೀನಿಧಿ ಶೆಟ್ಟಿ. ಕೆಜಿಎಫ್‍ನಲ್ಲಿ ಹೀರೋಯಿನ್ ಪಾತ್ರವನ್ನು ರಹಸ್ಯವಾಗಿಯೇ ಉಳಿಸಿಕೊಳ್ಳಲಾಗಿದೆ. ಹೊರಗೆ ಹೆಚ್ಚು ತೋರಿಸಿಲ್ಲ. ಆದರೆ, ಚಿತ್ರದಲ್ಲಿ ತಮ್ಮದು ಪೊಗರಿನ ಹುಡುಗಿಯ ಪಾತ್ರ ಎಂದಿದ್ದಾರೆ ಶ್ರೀನಿಧಿ ಶೆಟ್ಟಿ.

ತುಂಬಾ ಪೊಗರು ಇರುವ ಹುಡುಗಿ. ಯಾರಿಗೂ ಕೇರ್ ಮಾಡದ ಸ್ವಭಾವ. ಬೇಕು ಎನಿಸಿದ್ದನ್ನು ಪಡೆದೇ ತೀರುವ ಹಠಮಾರಿ... ಹೀಗೆ ಪಾತ್ರಕ್ಕೆ ಹಲವು ಶೇಡ್‍ಗಳಿವೆ ಎಂದಿದ್ದಾರೆ ಶ್ರೀನಿಧಿ ಶೆಟ್ಟಿ.

ಶ್ರೀನಿಧಿಗೆ ಇದು ಮೊದಲ ಸಿನಿಮಾ. ಮೊದಲ ಸಿನಿಮಾಗಾಗಿಯೇ ಎರಡೂವರೆ ವರ್ಷ ಕಾದಿದ್ದಕ್ಕೆ ಬೇಸರವೇನಿಲ್ಲ. ಅದೊಂದು ಯುನಿವರ್ಸಿಟಿಯಂತಿತ್ತು. ಬಹಳಷ್ಟು ಕಲಿತಿದ್ದೇನೆ ಎಂದಿದ್ದಾರೆ ಶ್ರೀನಿಧಿ.