` ರೋರಿಂಗ್ ಸ್ಟಾರ್ ಭರಾಟೆಗೆ ಚಾಲೆಂಜಿಂಗ್ ಸ್ಟಾರ್ ಪವರ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
bharate teaser launched by darshan
Bharaate Teaser Out

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಭರಾಟೆ ಚಿತ್ರದ ಟೀಸರ್ ರಿಲೀಸ್ ಆಗಿದೆ. ಟೀಸರ್ ಬಿಡುಗಡೆ ಧಮಾಕದ ಸಂಭ್ರಮವನ್ನು ಡಬಲ್ ಮಾಡಿರೋದು ದರ್ಶನ್. ಶ್ರೀಮುರಳಿಗಾಗಿ, ತಮಗಾಗಿ ರಿಜಿಸ್ಟರ್ ಮಾಡಿಸಿದ್ದ ಮದಗಜ ಟೈಟಲ್‍ನ್ನೇ ಗಿಫ್ಟ್ ಆಗಿ ಕೊಟ್ಟ ದರ್ಶನ್, ಭರಾಟೆ ಟೀಸರ್‍ನ್ನೂ ಬಿಡುಗಡೆ ಮಾಡಿ ಸಂಭ್ರಮಿಸಿದ್ದಾರೆ. 

ಎಲ್ಲರೂ ಜೀವಿಸುತ್ತಾರೆ, ಕೆಲವರು ಮಾತ್ರ ಅಮರರಾಗುತ್ತಾರೆ ಎಂದು ಅಂಬರೀಷ್ ಅವರಿಗೆ ಶ್ರದ್ಧಾಂಜಲಿ ಹೇಳಿಯೇ ಟೀಸರ್ ಬಿಟ್ಟಿದೆ ಭರಾಟೆ ಟೀಂ. ಮಫ್ತಿ ನಂತರ ಶ್ರೀಮುರಳಿ ಅಭಿನಯಿಸುತ್ತಿರುವ ಸಿನಿಮಾ ಭರಾಟೆ. ಭರ್ಜರಿ ನಂತರ ಚೇತನ್ ಕುಮಾರ್ ನಿರ್ದೇಶಿಸುತ್ತಿರುವ ಸಿನಿಮಾ ಭರಾಟೆ. ಸುಪ್ರಿತ್ ನಿರ್ಮಾಣದ ಸಿನಿಮಾದಲ್ಲಿ ಶ್ರೀಲೀಲಾ ನಾಯಕಿ. ಮುಂದಿನ ವರ್ಷ ಬೇಸಗೆ ರಜದ ಹೊತ್ತಿಗೆ ಥಿಯೇಟರುಗಳಲ್ಲಿ ಭರಾಟೆಯ ಸದ್ದು ಮೊಳಗಲಿದೆ.

#

Gubbi Mele Bramhastra Movie Gallery

Rightbanner02_gimmick_inside

Nanna Prakara Audio Release Images