ಸಿನಿಮಾ ಮಾಡೋದಷ್ಟೆ ಅಲ್ಲ, ಸಿನಿಮಾ ರಿಲೀಸ್ ಮಾಡೋದು ಅತೀ ದೊಡ್ಡ ಚಾಲೆಂಜ್. ಈಗ ಆ ಚಾಲೆಂಜ್‍ಗಳ ಲಿಸ್ಟ್‍ಗೆ ಇನ್ನೊಂದು ಸೇರ್ಪಡೆ, ಚಿತ್ರವನ್ನು ಪೈರಸಿ ಆಗದಂತೆ ತಡೆಯೋದು. ಇತ್ತೀಚೆಗಷ್ಟೇ ರಿಲೀಸ್ ಆದ ರಜನಿ-ಅಕ್ಷಯ್ ಅಭಿನಯದ 2.0 ಸಿನಿಮಾಗೆ ಚಾಲೆಂಜ್ ಹಾಕಿ ಪೈರಸಿ ಮಾಡಿದ್ದರು ಹ್ಯಾಕರ್ಸ್. ಈಗ ಕೆಜಿಎಫ್ ತಂಡಕ್ಕೂ ಆ ಭಯ ಕಾಡುತ್ತಿದೆ. ಹಾಗೆಂದು ಸುಮ್ಮನೆ ಕೂರೋಕಂತೂ ಸಾಧ್ಯವಿಲ್ಲ. ಹೋರಾಡಲೇ ಬೇಕು.
ಕೆಜಿಎಫ್ ಪೈರಸಿ ಆಗದಂತೆ ತಡೆಯಲು ಹಲವಾರು ಕ್ರಮ ಕೈಗೊಂಡಿರುವ ಕೆಜಿಎಫ್ ತಂಡ, ಅದಕ್ಕಾಗಿಯೇ ಒಂದು ಹೆಲ್ಪ್‍ಲೈನ್ ಆರಂಭಿಸಿದೆ. ಒಂದು ಟೀಂ ಸೆಟ್ ಮಾಡಿದೆ. ನಿಮಗೆ ಎಲ್ಲಾದರೂ ಕೆಜಿಎಫ್‍ನ ಪೈರಸಿ ವಿವರ, ಮಾಹಿತಿ ಸಿಕ್ಕರೆ ತಕ್ಷಣ ಈ ನಂ.ಗೆ 8978650014 ಕರೆ ಮಾಡಿ.
ಸ್ವತಃ ನಿರ್ಮಾಪಕ ವಿಜಯ್ ಕಿರಗಂದೂರು, ನಟ ಯಶ್, ನಿರ್ದೇಶಕ ಪ್ರಶಾಂತ್ ನೀಲ್.. ಎಲ್ಲರೂ ತಮ್ಮ ಅಭಿಮಾನಿಗಳಿಗೆ ಮಾಡಿರುವ ಮನವಿ ಇದೇ. 4 ವರ್ಷ ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ಸಿನಿಮಾವನ್ನು ಥಿಯೇಟರಿನಲ್ಲಿಯೇ ನೋಡಿ.