ತಮನ್ನಾ ಭಾಟಿಯಾ.. ಇದೀಗ ತಾನೆ ಕೆಜಿಎಫ್‍ನ ಮಿಂಚಿನ ಬಳ್ಳಿಯಾಗಿ ಕಿಚ್ಚು ಹಚ್ಚಿಸಿರುವ ಚೆಲುವೆ. ಮಿಲ್ಕೀಬ್ಯೂಟಿ ಎಂದೇ ಫೇಮಸ್. ಆದರೆ, ತಮನ್ನಾ ಅವರೇ, ತಮ್ಮನ್ನು ಮಿಲ್ಕಿಬ್ಯೂಟಿ ಎನ್ನಬೇಡಿ ಎಂದು ಮನವಿ ಮಾಡಿದ್ದಾರೆ. ಅದಕ್ಕೆ ಅವರು ನೀಡಿರುವ ಕಾರಣ ಇದು.
ಮೈಬಣ್ಣದ ಮೇಲೆ ಒಬ್ಬರನ್ನು ಹೊಗಳುವುದು ಅಥವಾ ತೆಗಳುವುದು ಒಳ್ಳೆಯದಲ್ಲ. ಮೈಬಣ್ಣದ ಮೇಲೆ ತಾರತಮ್ಯ ಮಾಡುವ ಭಾವನೆ ಮೊದಲು ತೊಲಗಬೇಕು. ಹೀಗಾಗಿ ನನಗೆ ಮಿಲ್ಕಿಬ್ಯೂಟಿ ಎಂದು ಕರೆದಾಗ ಕಿರಿಕಿರಿಯಾಗುತ್ತದೆ ಎಂದಿದ್ದಾರೆ ತಮನ್ನಾ.