ಜನವರಿಯಲ್ಲಿ ಸ್ಟಾರ್ ನಟರ ಚಿತ್ರಗಳು ಚಿತ್ರಮಂದಿರಗಳಲ್ಲಿ ತುಂಬಿ ತುಳುಕಲಿವೆ. ಶಿವಣ್ಣ, ಪುನೀತ್ ಚಿತ್ರಗಳು ರಿಲೀಸ್‍ಗೆ ರೆಡಿಯಾಗಿರುವಾಗಲೇ ನಿಖಿಲ್ ಕುಮಾರಸ್ವಾಮಿ ಅಭಿನಯದ ಸೀತಾರಾಮ ಕಲ್ಯಾಣ ಚಿತ್ರ, ಬಿಡುಗಡೆ ದಿನಾಂಕ ಘೋಷಿಸಿದೆ.
ಜನವರಿ 25ಕ್ಕೆ ನಾವು ತೆರೆಗೆ ಬರುವುದು ಖಚಿತ. ಚಿತ್ರದ ಬಿಡುಗಡೆಗೆ ಸಿದ್ಧರಾಗುತ್ತಿದ್ದೇವೆ ಎಂದು ಘೋಷಿಸಿದ್ದಾರೆ ನಿಖಿಲ್.
ಹರ್ಷ ನಿರ್ದೇಶನದ ಸೀತಾರಾಮ ಕಲ್ಯಾಣ ಚಿತ್ರಕ್ಕೆ ರಚಿತಾ ರಾಮ್ ನಾಯಕಿ. ಸಿಎಂ ಕುಮಾರಸ್ವಾಮಿ ಬ್ಯಾನರ್‍ನ ಕೌಟುಂಬಿಕ ಕಥಾ ಹಂದರದ ಚಿತ್ರವಿದು.