` ಜೋಕೆ.. ಹಾಡು ಬಂತು.. ಹೇಗಿದ್ದಾಳೆ ಮಿಲ್ಕಿಬ್ಯೂಟಿ..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
kgf's jakae lyrical video song creates sensation
Tamannah's In Jokae song from KGF

ಜೋಕೆ.. ನಾನು ಬಳ್ಳಿಯ ಮಿಂಚು.. ಈ ಹಾಡನ್ನು ಕೆಜಿಎಫ್‍ಗೆ ಬಳಸಿಕೊಳ್ಳಲಾಗುತ್ತಿದೆ ಎಂಬ ಸುದ್ದಿ ಬಂದಾಗಿನಿಂದ ಚಿತ್ರರಸಿಕರ ನಿರೀಕ್ಷೆ ಜೋರಾಗಿಯೇ ಇತ್ತು. ಅದರಲ್ಲೂ ಈ ಹಾಡಿಗೆ ಮಿಲ್ಕಿಬ್ಯೂಟಿ ತಮನ್ನಾ ಸೊಂಟ ಬಳುಕಿಸಿದ್ದಾರೆ ಎಂದಾಗ.. ನಿರೀಕ್ಷೆ ಮುಗಿಲುಮುಟ್ಟಿತ್ತು. ಹಾಗೆ ಮುಗಿಲು ಮುಟ್ಟಿದ ನಿರೀಕ್ಷೆಯನ್ನು ಸ್ವಲ್ಪ ಮಟ್ಟಿಗೆ ತಣಿಸಿದೆ ಕೆಜಿಎಫ್ ಟೀಂ.

ಕೆಜಿಎಫ್ ಚಿತ್ರದ ಲಿರಿಕಲ್ ವಿಡಿಯೋ ಹೊರಬಿದ್ದಿದೆ. ಹಾಡಿನ ಒಂದಿಷ್ಟು ಫೋಟೋಗಳನ್ನು ಬಳಸಿಕೊಂಡು ಲಿರಿಕಲ್ ವಿಡಿಯೋ ಹೊರತರಲಾಗಿದೆ. ಯಶ್-ತಮನ್ನಾ ಕೆಮಿಸ್ಟ್ರಿ ಹೇಗಿರಲಿದೆ ಅನ್ನೋ ಕುತೂಹಲವನ್ನು ಸಿನಿಮಾ ರಿಲೀಸ್ ಆಗುವವರೆಗೂ ಉಳಿಸಿಕೊಳ್ಳೋ ಇರಾದೆ ಚಿತ್ರತಂಡಕ್ಕೆ ಇದ್ದ ಹಾಗಿದೆ.

ನಿರ್ದೇಶಕ ಪ್ರಶಾಂತ್ ನೀಲ್, ಸಂಗೀತ ನಿರ್ದೇಶಕ ರವಿ ಬಸ್ರೂರು.. ಆ ಕುತೂಹಲವನ್ನು ಹಾಗೆಯೇ ಇಟ್ಟುಕೊಂಡಿದ್ದಾರೆ.