ಡಿಸೆಂಬರ್ 21, ಕೆಜಿಎಫ್ ಡೇ ಎನ್ನುವಂತಾಗಿ ಹೋಗಿದೆ. ಅಷ್ಟರಮಟ್ಟಿಗೆ ಹವಾ ಎಬ್ಬಿಸಿದೆ ಕೆಜಿಎಫ್. ಅದೇ ದಿನ.. ರಮೇಶ್ ಅರವಿಂದ್, ಪಾರೂಲ್ ಯಾದವ್ ಕಾಂಬಿನೇಷನ್ನಿನ ಬಟರ್ ಫ್ಲೈ ಕೂಡಾ ಬರುತ್ತಿದೆ.
ಬಟರ್ ಫ್ಲೈ, ಹಿಂದಿಯ ಕ್ವೀನ್ ಚಿತ್ರದ ರೀಮೇಕ್. ಪಾರೂಲ್ ಯಾದವ್, ಕಂಗನಾ ರಾವತ್ ಮಾಡಿದ್ದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ದೇಶನ, ರಮೇಶ್ ಅರವಿಂದ್ ಅವರದ್ದು.
ಕೆಜಿಎಫ್ ಡೇ ದಿನ, ಬಟರ್ ಫ್ಲೈ ಚಿತ್ರದ ಟೀಸರ್ ರಿಲೀಸ್ ಆಗುತ್ತಿದೆ. ಏಕಕಾಲದಲ್ಲಿ 4 ಭಾಷೆಯಲ್ಲಿ ಚಿತ್ರ ತಯಾರಾಗಿದ್ದು, ನಾಲ್ಕೂ ಭಾಷೆಯಲ್ಲಿ ಒಂದೇ ದಿನ ಟೀಸರ್ ಹೊರಬರಲಿದೆ. ತಮಿಳಿನಲ್ಲಿ ಕಾಜಲ್ ಅಗರ್‍ವಾಲ್, ತೆಲುಗಿನಲ್ಲಿ ತಮನ್ನಾ ಭಾಟಿಯಾ, ಮಲಯಾಳಂನಲ್ಲಿ ಮಂಜಿಮಾ ಮೋಹನ್ ನಟಿಸಿದ್ದಾರೆ.