` 1970ರಲ್ಲಿ ಅಣ್ಣಾವ್ರು.. 2018ಕ್ಕೆ ಯಶ್..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
then rajkumar now yash
Jokai Song

ಕೆಜಿಎಫ್ ಈಗ ದೇಶಾದ್ಯಂತ ಹವಾ ಎಬ್ಬಿಸಿದೆ. ಈ ಹವಾದ ನಡುವೆಯೇ ಡಾ.ರಾಜ್ ನೆನಪಾಗುವಂತೆ ಮಾಡಿದ್ದಾರೆ ಕೆಜಿಎಫ್ ಟೀಂ ಸದಸ್ಯರು. ಅದಕ್ಕೆ ಕಾರಣ ಇಲ್ಲದೇ ಇಲ್ಲ. ಈ ಚಿತ್ರದಲ್ಲಿ ಬಳಸಿಕೊಂಡಿರುವ ಹಳೆಯ ಹಾಡಿದೆಯಲ್ಲ.. ಜೋಕೆ ನಾನು ಬಳ್ಳಿಯ ಮಿಂಚು ಹಾಡು.. ಆ ಹಾಡಿನ ವೊರಿಜಿನಲ್ ಇರೋದು ಡಾ.ರಾಜ್ ಅಭಿನಯದ ಚಿತ್ರದಲ್ಲಿ.

ಜೋಕೆ ನಾನು ಬಳ್ಳಿಯ ಮಿಂಚು ಹಾಡು 1970ರಲ್ಲಿ ರಿಲೀಸ್ ಆಗಿದ್ದ ಪರೋಪಕಾರಿ ಚಿತ್ರದ್ದು. ಆ ಚಿತ್ರದಲ್ಲಿ ಡಾ.ರಾಜ್, ಜಯಂತಿ ಜೋಡಿಯಾಗಿದ್ದರು. ಜೋಕೆ ಹಾಡಿಗೆ ಸಾಹಿತ್ಯ ಬರೆದಿದ್ದವರು ಇಬ್ಬರು ಮಹಾನ್ ಸಾಹಿತಿಗಳಾದ ಆರ್.ಎನ್.ಜಯಗೋಪಾಲ್ ಹಾಗೂ ಚಿ.ಉದಯಶಂಕರ್. ಆಗ ಹಾಡು ಹಾಡಿದ್ದವರು ಎಲ್. ಆರ್. ಈಶ್ವರಿ. ಈಗ ಹಾಡಿಗೆ ಧ್ವನಿಯಾಗಿರೋದು ಐರಾ ಉಡುಪಿ. ಆಗ ಆ ಹಾಡಿಗೆ ಹೆಜ್ಜೆ ಹಾಕಿದ್ದವರು ವಿಜಯಲಲಿತಾ. ಈಗ ಸ್ಟೆಪ್ ಹಾಕಿರೋದು ತಮನ್ನಾ ಭಾಟಿಯಾ.

48 ವರ್ಷಗಳ ನಂತರ ಜೋಕೆ ಹಾಡನ್ನು ರೀಮಿಕ್ಸ್ ಮಾಡಿ ಬಳಸಿಕೊಳ್ಳಲಾಗಿದೆ. ವೊರಿಜಿನಲ್ ಮ್ಯೂಸಿಕ್ ಡೈರೆಕ್ಟರ್ ಉಪೇಂದ್ರ ಕುಮಾರ್. ರೀಮಿಕ್ಸ್ ಹಾಡಿಗೆ ಸಂಗೀತ ನೀಡಿರುವುದು ರವಿ ಬಸ್ರೂರು.