14 ವರ್ಷಗಳ ನಂತರ ಶಿವರಾಜ್‍ಕುಮಾರ್ ನಟಿಸಿರುವ ರೀಮೇಕ್ ಸಿನಿಮಾ ಕವಚ. ಇದೇ ಮೊದಲ ಬಾರಿಗೆ ಅಂಧನ ಪಾತ್ರದಲ್ಲಿ ನಟಿಸಿರುವ ಶಿವಣ್ಣ, ತಮಗೆ ತಾವೇ ಹಾಕಿಕೊಂಡಿದ್ದ ರೀಮೇಕ್ ಮಾಡಲ್ಲ ಅನ್ನೋ ನಿರ್ಬಂಧವನ್ನ 14 ವರ್ಷಗಳ ಮುರಿದಿದ್ದಾರೆ. ಅದಕ್ಕೆ ಕಾರಣ, ಚಿತ್ರದ ಕಥೆ.
ಇದು ಮಲಯಾಳಂನ ಒಪ್ಪಂ ಚಿತ್ರದ ರೀಮೇಕ್. ಅಂಧನೊಬ್ಬ ಪುಟ್ಟ ಬಾಲಕಿಯನ್ನು ರಕ್ಷಿಸಿಕೊಳ್ಳಲು ಹೋರಾಡುವ ಕಥೆ. ಅದರ ಜೊತೆ ಚಿತ್ರವನ್ನು ಒಪ್ಪಿಕೊಳ್ಳೋಕೆ ಇನ್ನೂ ಒಂದು ಕಾರಣ, ಕನ್ನಡಕ್ಕಾಗಿ ಮಾಡಿಕೊಂಡಿರುವ ಬದಲಾವಣೆಗಳು.
`ವೊರಿಜಿನಲ್ ಚಿತ್ರದ ಥೀಮ್‍ನ್ನು ಬಿಟ್ಟುಕೊಟ್ಟಿಲ್ಲ. ಆದರೆ, ಶೇ.50ರಷ್ಟು ಕಥೆ, ಚಿತ್ರಕಥೆಯನ್ನು ಬದಲಾಯಿಸಿದ್ದೇವೆ. ಹಿಗಾಗಿಯೇ ಏಳೆಂಟು ತಿಂಗಳು ಚಿತ್ರದ ಚಿತ್ರಕಥೆಗಾಗಿ ಕೆಲಸ ಮಾಡಿದ್ದೇವೆ. ಹೀಗಾಗಿಯೇ ಶಿವಣ್ಣ ಅವರಿಗೆ ಒಂದೇ ಸಿಟ್ಟಿಂಗ್‍ನಲ್ಲಿ ಕಥೆ ಹೇಳಿ ಒಪ್ಪಿಸಲು ಸಾಧ್ಯವಾಯಿತು'' ಎಂದು ಹೇಳಿಕೊಂಡಿದ್ದಾರೆ ನಿರ್ದೇಶಕ ಜಿವಿಆರ್ ವಾಸು.
ರಾಮ್ ಗೋಪಾಲ್ ವರ್ಮಾ ಅವರೊಂದಿಗೆ ಸಹ ನಿರ್ದೇಶಕರಾಗಿದ್ದ ವಾಸು, ಕಿಲ್ಲಿಂಗ್ ವೀರಪ್ಪನ್ ಚಿತ್ರಕ್ಕೂ ಅಸಿಸ್ಟೆಂಟ್ ಆಗಿದ್ದರು. ಆಗ ಪರಿಚಯವಾಗಿದ್ದರಂತೆ ಶಿವಣ್ಣ. ಶಿವಣ್ಣ ರೀಮೇಕ್ ಮಾಡಲ್ಲ ಎಂದು ಗೊತ್ತಿದ್ದರೂ, ಕಥೆ ಸಿದ್ಧ ಪಡಿಸಿಕೊಂಡು ಹೇಳಿದಾಗ ಶಿವಣ್ಣ ಒಪ್ಪಿಕೊಂಡರು ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ ಡೈರೆಕ್ಟರ್ ವಾಸು. ಕವಚ ರಿಲೀಸ್‍ಗೆ ರೆಡಿಯಾಗಿದೆ.