ಏನಿದು ಬರೀ ನಂಬರ್ ಹಾಕಬಿಟ್ಟಿದ್ದೀರಲ್ಲ.. ಏನಿದು ಅಂದ್ರಾ.. ಇದು ಕೆಜಿಎಫ್ ಕ್ರೇಜ್. ಕನ್ನಡ ಚಿತ್ರರಂಗದಲ್ಲೇ ಕಂಡು ಕೇಳರಿಯದ ದಾಖಲೆ ಬರೆಯುತ್ತಿದೆ ಕೆಜಿಎಫ್. ಅದಕ್ಕೆ ಸಂಬಂಧಪಟ್ಟ ನಂಬರ್ ಸಾಧನೆ ಇದು.
ಕನ್ನಡದಲ್ಲಿ 350+ : ಕೆಜಿಎಫ್ ಕರ್ನಾಟಕದಲ್ಲಿ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ. ನರ್ತಕಿ ಮೇನ್ ಥಿಯೇಟರ್.
ಹಿಂದಿಯಲ್ಲೂ 350+ : ಹಿಂದಿಯಲ್ಲಿ ಫರ್ಹಾನ್ ಅಖ್ತರ್, ಅನಿಲ್ ತಡ್ವಾನಿ ಚಿತ್ರವನ್ನು ರಿಲೀಸ್ ಮಾಡುತ್ತಿದ್ದು, ಅಲ್ಲಿಯೂ 350ಕ್ಕೂ ಹೆಚ್ಚು ಥಿಯೇಟರ್‍ಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.
ತೆಲುಗಿನಲ್ಲಿ 300+ : ಟಾಲಿವುಡ್‍ನಲ್ಲಿ ವರಾಹಿ ಪ್ರೊಡಕ್ಷನ್ಸ್, ಚಿತ್ರವನ್ನು ವಿತರಣೆ ಮಾಡುತ್ತಿದ್ದು, ಇದೇ ಮೊದಲ ಬಾರಿಗೆ ಆಂಧ್ರ, ತೆಲಂಗಾಣದಲ್ಲಿ ಕನ್ನಡದ ಡಬ್ಬಿಂಗ್ ಚಿತ್ರವೊಂದು 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ.
ತಮಿಳುನಾಡಿನಲ್ಲಿ 250+ : ವಿಶಾಲ್, ತಮಿಳುನಾಡಿನಲ್ಲಿ 150 ಸ್ಕ್ರೀನ್‍ಗಳಲ್ಲಿ ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ.
ಕೇರಳದಲ್ಲಿ 150+ : ಮಲಯಾಳಂನಲ್ಲಿ ಅಂದರೆ ಕೇರಳದಲ್ಲಿ 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.
ವಿದೇಶಗಳಲ್ಲಿ 100+ : ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಸೇರಿದಂತೆ ವಿದೇಶಗಳಲ್ಲಿಯೂ ಏಕಕಾಲಕ್ಕೆ ರಿಲೀಸ್ ಆಗುತ್ತಿದ್ದು, 100ಕ್ಕೂ ಹೆಚ್ಚು ಸ್ಕ್ರಿನ್‍ಗಳಲ್ಲಿ ರಿಲೀಸಾಗುತ್ತಿದೆ.
ನಾಳೆಯಿಂದ ಅಂದರೆ ಭಾನುವಾರದಿಂದ ಕೆಜಿಎಫ್ ಬುಕ್ಕಿಂಗ್ ಶುರುವಾಗಲಿದೆ.