ನೀನಾಸಂ ಸತೀಶ್ ಅಭಿನಯದ ಜೇಕಬ್ ವರ್ಗಿಸ್ ನಿರ್ದೇಶನದ ಚಿತ್ರ ಚಂಬಲ್, ರಿಲೀಸ್‍ಗೆ ರೆಡಿಯಾಗಿದೆ. ಕಾರ್ಪೊರೇಟ್ ಜಗತ್ತಿನ ಕಥೆಯಂತೆ ಕಾಣುತ್ತಿರುವ ಚಂಬಲ್, ಥ್ರಿಲ್ಲರ್ ಸಿನಿಮಾ. ಈ ಸಿನಿಮಾಗೆ ನೆಟ್‍ಫ್ಲಿಕ್ಸ್‍ನವರು 10 ಕೋಟಿ ಕೊಟ್ಟು ಖರೀದಿಸುವ ಆಫರ್ ಕೊಟ್ಟರೂ ಬೇಡ ಎಂದು ತಿರಸ್ಕರಿಸಿ ಥಿಯೇಟರಿಗೆ ಬರುತ್ತಿರುವ ಚಿತ್ರವಿದು. ಈ ಚಿತ್ರಕ್ಕೀಗ ಹೊಸ ಪವರ್ ಸಿಕ್ಕಿದೆ. ಆ ಹೊಸ ಪವರ್ ಕೊಟ್ಟಿರೋದು ಪವರ್‍ಸ್ಟಾರ್ ಪುನೀತ್ ರಾಜ್ ಕುಮಾರ್.
ಚಂಬಲ್ ಚಿತ್ರಕ್ಕೆ ಪುನೀತ್ ರಾಜ್‍ಕುಮಾರ್ ಕಂಠದಾನ ಮಾಡಿದ್ದು, ಟೀಸರ್‍ನಲ್ಲಷ್ಟೇ ಅಲ್ಲ, ಇಡೀ ಚಿತ್ರದಲ್ಲಿ ಪುನೀತ್ ಧ್ವನಿ ಇರಲಿದೆಯಂತೆ. ರಾಜರಥ ಚಿತ್ರದಲ್ಲಿಯೂ ಹೀಗೆಯೇ ಪುನೀತ್ ಧ್ವನಿ ಬಳಸಿಕೊಳ್ಳಲಾಗಿತ್ತು.
ಪೃಥ್ವಿ, ಸವಾರಿ ಚಿತ್ರಗಳನ್ನು ಡೈರೆಕ್ಷನ್ ಮಾಡಿದ್ದ ಜೇಕಬ್ ವರ್ಗಿಸ್, ಚಿತ್ರದ ನಿರ್ಮಾಪಕರಲ್ಲೂ ಒಬ್ಬರು. ಸೋನು ಗೌಡ, ಕಿಶೋರ್ ಚಿತ್ರದಲ್ಲಿ ನಟಿಸಿದ್ದಾರೆ.