ಕೆಜಿಎಫ್ ಚಿತ್ರದ ಹಿಂದಿ ವರ್ಷನ್ ಐಟಂ ಸಾಂಗ್ ಗಲಿ ಗಲಿ ಹಾಡಿನ ವಿಡಿಯೋ ರಿಲೀಸ್ ಆಗಿದೆ. ಹಿಂದಿಯಲ್ಲಿ ಈ ಹಾಡಿಗೆ ಹೆಜ್ಜೆ ಹಾಕಿರುವುದು ಮೌನಿ ರಾಯ್. ಹಾಡು ಆನ್‍ಲೈನ್‍ನಲ್ಲಿ ಧೂಳೆಬ್ಬಿಸಿದೆ.
ಕನ್ನಡದಲ್ಲಿ ಜೋಕೆ.. ನಾನು ಬಳ್ಳಿಯ ಮಿಂಚು ಹಾಡಿನ ರೀಮಿಕ್ಸ್ ಸಾಂಗ್ ಬಳಸಿಕೊಂಡಿದ್ದಾರಲ್ಲ.. ಹಾಗೆಯೇ.. ಗಲಿ ಗಲಿ ಹಾಡನ್ನು ಹಿಂದಿ ಕೆಜಿಎಫ್‍ನಲ್ಲಿ ಬಳಸಿಕೊಳ್ಳಲಾಗಿದೆ.
ಹಿಂದಿ ಚಿತ್ರರಸಿಕರಿಗೆ ಗಲಿ ಗಲಿ ಸಾಂಗ್‍ನ ವಿಡಿಯೋ ತೋರಿಸಿ ಕಣ್ಣು, ಕಿವಿ ಎರಡನ್ನೂ ತಣಿಸಿರುವ ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಣ ಸಂಸ್ಥೆ ಹೊಂಬಾಳೆ.. ಕನ್ನಡ ಚಿತ್ರರಸಿಕರಿಗೆ
ತಮನ್ನಾ ಹಾಡು ತೋರಿಸೋದು ಯಾವಾಗ..?