2018 ಕೊನೆಯಾಗುತ್ತಿದೆ. ಕೆಜಿಎಫ್ ಹವಾ ಈ ವಾರ. ಅದಾದ ನಂತರದ ಕೊನೆಯ ವಾರದಲ್ಲೂ 8 ಸಿನಿಮಾಗಳು ರಿಲೀಸ್‍ಗೆ ರೆಡಿಯಿವೆ. ಇಷ್ಟಿದ್ದರೂ ಈ ವರ್ಷದ ಸ್ಪೆಷಾಲಿಟಿ ಎಂದರೆ ಸ್ಟಾರ್ ನಟರ ಸಿನಿಮಾಗಳ ಕೊರತೆ.
ವರ್ಷದ ಆರಂಭದಲ್ಲಂತೂ ಸ್ಟಾರ್ ಸಿನಿಮಾಗಳೇ ಇರಲಿಲ್ಲ. ಇಡೀ ವರ್ಷದಲ್ಲಿ ಬಹುತೇಕ ಎಲ್ಲ ಸ್ಟಾರ್‍ಗಳ ತಲಾ ಒಂದೊಂದು ಚಿತ್ರ ಬಂದವು. ಇದರ ನಡುವೆಯೂ ಪುನೀತ್, ದರ್ಶನ್, ರಕ್ಷಿತ್ ಶೆಟ್ಟಿ ಸಿನಿಮಾಗಳು ಬರಲೇ ಇಲ್ಲ. ಇದು 2018ರ ಕಥೆ. 2019ರ ಕಥೆ ಫುಲ್ ಡಿಫರೆಂಟ್.
2019ರ ಆರಂಭದಿಂದಲೇ ಶಿವಣ್ಣ ಬರುವುದು ಬಹುತೇಕ ಖಚಿತ. ಕವಚ ರಿಲೀಸ್‍ಗೆ ರೆಡಿ. ಪುನೀತ್‍ರ ನಟಸಾರ್ವಭೌಮ, ದರ್ಶನ್‍ರ ಕುರುಕ್ಷೇತ್ರ, ಯಜಮಾನ, ಸುದೀಪ್‍ರ ಪೈಲ್ವಾನ್, ರಕ್ಷಿತ್ ಶೆಟ್ಟಿಯ ಅವನೇ ಶ್ರೀಮನ್ನಾರಾಯಣ, ಉಪೇಂದ್ರರ ಐ ಲವ್ ಯೂ, ಶಿವಣ್ಣ ಅಭಿನಯದ ರುಸ್ತುಂ, ಶ್ರೀಮುರಳಿಯವರ ಭರಾಟೆ, ಗಣೇಶ್ ಅಭಿನಯದ ಗಿಮಿಕ್ ಇವುಗಳ ಜೊತೆಗೆ ರಿಷಬ್ ಶೆಟ್ಟಿಯವರ ಬೆಲ್‍ಬಾಟಂ, ಪುನೀತ್ ಪ್ರೊಡಕ್ಷನ್ಸ್‍ನ ಕವಲುದಾರಿ.. ಮೊದಲಾದ ದೊಡ್ಡ ದೊಡ್ಡ ಸಿನಿಮಾಗಳು ಕ್ಯೂನಲ್ಲಿವೆ. ಪಟ್ಟಿಯಲ್ಲಿ ಕೆಲವು ಹೆಸರು ಮಿಸ್ ಆಗಿರಬಹುದೇನೋ.. ಆದರೆ, 2019ರ ಆರಂಭವಂತೂ ಅಬ್ಬರಿಸಿ ಘರ್ಜಿಸಲಿದೆ.