ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್, ದೇಶಾದ್ಯಂತ ಅಲೆ ಎಬ್ಬಿಸಿದೆ. ಡಿಸೆಂಬರ್ 21ಕ್ಕೆ ರಿಲೀಸ್ ಆಗುತ್ತಿರುವ ಸಿನಿಮಾಗೆ ಮೊದಲ ಎದುರಾಳಿಯೇ ಶಾರೂಕ್ ಖಾನ್ ಅಭಿನಯದ ಝೀರೋ. ಅದೇ ದಿನ ತೆರೆ ಕಾಣುತ್ತಿರುವ ಝೀರೋಗಿಂತಲೂ ದೊಡ್ಡ ಟ್ರೆಂಡ್ ಸೃಷ್ಟಿಸಿದೆ ಕೆಜಿಎಫ್. ಇದೆಲ್ಲದರ ನಡುವೆಯೇ ಕೆಜಿಎಫ್‍ಗೆ ಬಹುಪರಾಕ್ ಎಂದಿದ್ದಾರೆ ಶಾರುಕ್ ಖಾನ್.
ಚಿತ್ರದ ಟ್ರೇಲರ್ ನೋಡಿದೆ. ತುಂಬಾ ಚೆನ್ನಾಗಿದೆ. ಚಿತ್ರಕ್ಕಾಗಿ ತಂಡದವರು 3 ವರ್ಷ ಶ್ರಮ ಹಾಕಿದ್ದಾರೆ ಎಂದು ತಿಳಿಯಿತು. ಚಿತ್ರದ ಹೀರೋ, ಹೀರೋಯಿನ್, ಇಡೀ ಟೀಂ ಬಗ್ಗೆ ತಿಳಿದುಕೊಂಡೆ. ಯಶ್ ಮುಂಬೈಗೆ ಬಂದಾಗ ಖಂಡಿತಾ ಭೇಟಿಯಾಗುತ್ತೇನೆ ಎಂದಿದ್ದಾರೆ ಶಾರುಕ್ ಖಾನ್.
ಸಿನಿಮಾವನ್ನು ದಕ್ಷಿಣದ ಸಿನಿಮಾ, ಉತ್ತರದ ಸಿನಿಮಾ ಎಂದು ಬೇಧ ಭಾವ ಮಾಡೋದು ಬೇಡ. ಎಲ್ಲವೂ ಭಾರತೀಯ ಚಿತ್ರಗಳೇ. ಕೆಜಿಎಫ್‍ಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ದಾರೆ ಶಾರುಕ್.