` ಗಾಂಧಿ ಪ್ರೇಮಿ ನಾಥೂರಾಮ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
gandhi lover naathuram
Rishab Shetty

ನಾಥೂರಾಮ್ ಗೋಡ್ಸೆ. ಮಹಾತ್ಮ ಗಾಂಧೀಜಿಯನ್ನು ಹತ್ಯೆಗೈದ ಹಂತಕ. ಈಗ ಆತನ ಹೆಸರಿನಲ್ಲೊಂದು ಸಿನಿಮಾ ಬರುತ್ತಿದೆ. ಚಿತ್ರದ ಟೈಟಲ್ ನಾಥೂರಾಮ್. ಆದರೆ, ಈ ನಾಥೂರಾಮ್, ಗಾಂಧಿ ಪ್ರೇಮಿ. ಗಾಂಧಿ ತತ್ವ ಫಾಲೋ ಮಾಡುವ ಗಾಂಧಿ ತತ್ವವಾದಿ.

ಗಾಂದಿಯ ಬಗ್ಗೆ ಪಾಠ ಮಾಡೋ ಲೆಕ್ಚರರ್ ಆಗಿ ನಟಿಸುತ್ತಿದ್ದಾರೆ ರಿಷಬ್ ಶೆಟ್ಟಿ. ಚಿತ್ರದ ಟೈಟಲ್ ಮತ್ತು ಪಾತ್ರದ ಒನ್‍ಲೈನ್, ಅಚ್ಚರಿ ಮೂಡಿಸಿರುವುದು ನಿಜ. ಕಿರಿಕ್ ಪಾರ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಸಕ್ಸಸ್ ಖುಷಿಯಲ್ಲಿರೋ ರಿಷಬ್ ಶೆಟ್ಟಿ, ಈ ಚಿತ್ರದ ನಾಯಕ. ನಿರ್ದೇಶಕನಾಗಿ ಸತತ 2 ಹಿಟ್ ಸಿನಿಮಾ ನೀಡಿರುವ ರಿಷಬ್, ನಾಯಕರಾಗಿ ನಟಿಸುತ್ತಿರುವ 2ನೇ ಸಿನಿಮಾ ನಾಥೂರಾಮ್. ಬೆಲ್‍ಬಾಟಮ್ ಚಿತ್ರದ ಟೀಸರ್ ಹೊರಬಂದಿದ್ದು, ಮೆಚ್ಚುಗೆ ಗಳಿಸಿದೆ. ಹೀಗಿರುವಾಗಲೇ 2ನೇ ಚಿತ್ರ ನಾಥೂರಾಮ್ ಶುರುವಾಗಿದೆ.